ಹೈದರಾಬಾದ್: ನೆನ್ನೆ (ಏ.23) ಹೈದರಾಬಾದ್ನಲ್ಲಿ ನಡೆದಿರುವ ಸನ್ರೈಸರ್ಸ್ ಹೈದರಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ವಿವಾದಕ್ಕೆ ಕಾರಣವಾಗಿದ್ದು. ಅಂಪೈರ್ ಔಟ್ ಕೊಡುವ ಮೊದಲೇ ಇಶಾನ್ ಕಿಶಾನ್ ಡಗ್ಔಟ್ಗೆ ನಡೆದಿದ್ದು ವಿವಾದಕ್ಕೆ ಕಾರಣವಾಗಿದೆ. ಇದರಿಂದ ನೆನ್ನೆ ನಡೆದ ಪಂದ್ಯ ಫಿಕ್ಸ್ ಆಗಿತ್ತೇ ಎಂಬ ಚರ್ಚೆ ಆರಂಭವಾಗಿದೆ.
ಸನ್ ರೈಸರ್ಸ್ ತಂಡದ ಬ್ಯಾಟರ್ ಇಶಾನ್ ಕಿಶನ್ ಅವರು ಅಂಪೈರ್ ತೀರ್ಮಾನವನ್ನು ಪ್ರಶ್ನಿಸದೇ ಪೆವಿಲಿಯನ್‌ನತ್ತ ಯಾಕೆ ತೆರಳಿದರು ಎಂಬುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಬ್ಯಾಟರ್, ಬೌಲರ್ ಮತ್ತು ಅಂಪೈರ್ ಗಳ ವರ್ತನೆ ನೋಡಿ ನೆಟ್ಟಿಗರು ಇದು ಮ್ಯಾಚ್ ಫಿಕ್ಸಿಂಗ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ :ಭಾರತೀಯ ನೌಕಾಸೇನೆಯಿಂದ ಕ್ಷಿಪಣಿ ಪರೀಕ್ಷೆ: ಯುದ್ದ ತಾಲೀಮು ಆರಂಭ
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಟ್ರಾವಿಸ್ ಹೆಡ್ ಅವರು 2ನೇ ಓವರ್ 2ನೇ ಎಸೆತದಲ್ಲಿ ಡಕೌಟ್ ಆದರು. ಬಳಿಕ ಬಂದ ಇಶಾನ್ ಕಿಶನ್ ಅವರು ಕೇವಲ 1 ರನ್ ಗಳಿಸಿದ್ದರು, ಆಗ ವೇಗಿ ದೀಪಕ್ ಚಾಹರ್ ಎಸೆದ 3ನೇ ಓವರಿನ ಮೊದಲನೇ ಎಸೆತದಲ್ಲೇ ಔಟ್ ಆಗಿದ್ದೇನೆಂದು ತಾನಾಗಿಯೇ ಪೆವಿಲಿಯನ್‌ಗೆ ಮರಳಿದ್ದರು.