Saturday, April 19, 2025

ನಕಲಿ ಸಿಬಿಐ ಅಧಿಕಾರಿಗಳ ಹಾವಳಿ; ಮಗಳನ್ನು ಬಂಧಿಸಿದ್ದೇವೆ ಎಂದು ತಂದೆಯಿಂದ ಹಣ ಪಡೆದ ಖದೀಮರು

ಬೀದರ್​ : ಇತ್ತೀಚೆಗೆ ನಕಲಿ ಅಧಿಕಾರಿಗಳ ಹಾವಳಿ ಹೆಚ್ಚಾಗುತ್ತಿದ್ದು. ಇಲ್ಲೊಂದು ಖರ್ತನಾಖ್​ ಗ್ಯಾಂಗ್​ ಸಿಬಿಐ ಅಧಿಕಾರಿಗಳ ಹೆಸರಲ್ಲಿ ವ್ಯಕ್ತಿಯೋರ್ವನಿಗೆ ಕರೆ ಮಾಡಿದ್ದು. ನಿಮ್ಮ ಮಗಳನ್ನು ಡ್ರಗ್ಸ್​ ಹೆಸರಲ್ಲಿ ಬಂಧಿಸಲಾಗಿದೆ ಎಂದು ಬೆದರಿಕೆ ಹಾಕಿ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಘಟನೆ ನಡೆದಿದ್ದು. ನಗರದ ಕರೀಮ್ ಕಾಲೋನಿ ನಿವಾಸಿ ಮುನಿರ್ ತುರುಂಚಿ ಎಂಬ ವ್ಯಕ್ತಿಗೆ ನಕಲಿ ಸಿಬಿಐ ಅಧಿಕಾರಿಗಳು ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮುನಿರ್​ ತುರಂಚಿಯ ಮಗಳು ಸಿಇಟಿ ಪರೀಕ್ಷೆ ಬರೆಯಲು ಎಂದು ಹೋಗಿದ್ದಳು. ಈ ವೇಳೆ ಆಘಂತುಕರು ಮುನಿರ್​ಗೆ ಕರೆ ಮಾಡಿದ್ದು. ‘ನಾಲ್ಕು ಜನ ಯುವತಿಯರೊಂದಿಗೆ ನಿಮ್ಮ ಮಗಳನ್ನು ಡ್ರಗ್ಸ್​​ ಕೇಸಿನಲ್ಲಿ ಬಂಧಿಸಿದ್ದೇವೆ. ಆಕೆಯನ್ನು ಬಿಡಬೇಕೂ ಎಂದರೆ 2 ಲಕ್ಷ ಹಣ ನೀಡಿ ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ :ರೈಲು ಹಳಿ ತಪ್ಪಿಸಲು ಯತ್ನ; ಮರದ ತುಂಡಿನ ಜೊತೆ ಜೈ ಶ್ರೀರಾಮ ಹೆಸರಿಗೆ ಕೇಸರಿ ಬಟ್ಟೆ ಪತ್ತೆ

ಇದನ್ನು ಕೇಳಿಸಿಕೊಂಡ ಮುನಿರ್​ ಹೆದರಿದ್ದು. ನಕಲಿ ಅಧಿಕಾರಿಗಳಿಗೆ ತನ್ನ ಬಳಿ ಅಷ್ಟು ಹಣವಿಲ್ಲ ಎಂದು ಹೇಳಿದ್ದು, ತನ್ನ ಬಳಿಯಿದ್ದ 14ಸಾವಿರ ಹಣವನ್ನು ನಕಲಿ ಸಿಬಿಐ ಅಧಿಕಾರಿಗಳ ಖಾತೆಗೆ ಜಮೆ ಮಾಡಿದ್ದಾರೆ. ಹಣ ಹಾಕಿದ ನಂತರ ಮುನಿರ್ ಪೊಲೀಸ್​ ಠಾಣೆಗೆ ಹೋಗಿದ್ದು. ಅಲ್ಲಿ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಅಲ್ಲಿಂದ ನೇರವಾಗಿ ಮುನಿರ್​ ಸಿಇಟಿ ಎಕ್ಸಾಂ ನಡೆಯುತ್ತಿದ್ದ ಎಕ್ಸಾಂ ಸೆಂಟರ್​ಗೆ ಧಾವಿಸಿದ್ದು. ಅಲ್ಲಿ ಮಗಳನ್ನು ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆ ಸಂಬಂಧ ಇನ್ನು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES