ಮುಂಬೈ: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ನಗದು ಸಮಸ್ಯೆ ನೀಗಿಸಲು ಭಾರತೀಯ ರೈಲ್ವೇ ಇಲಾಖೆ ಮಹತ್ವದ ಕ್ರಮಕೈಗೊಂಡಿದ್ದು. ರೈಲಿನಲ್ಲೇ ಎಟಿಎಂ ಸೌಲಭ್ಯ ಲಭ್ಯವಾಗಲಿದೆ.
ರೈಲಿನಲ್ಲಿ ದಿನಗಟ್ಟಲೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಭಾರತಿಯ ರೈಲ್ವೇ ಇಲಾಖೆ ರೈಲಿನಲ್ಲಿ ಎಟಿಎಂ ಪರಿಚಯಿಸಲು ಮುಂದಾಗಿದ್ದು. ಆರಂಭಿಕ ಹಂತದಲ್ಲಿ ಮುಂಬೈ – ಮನ್ಮಾಡ್ ಪಂಚವಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಎಟಿಎಂ ಅಳವಡಿಸಲಾಗಿದೆ, ದೇಶದ ಮೊದಲ ಎಟಿಎಂ ಸಹಿತ ರೈಲು ಎಂಬ ಹೆಗ್ಗಳಿಕೆಗೆ ಈ ರೈಲ ಪಾತ್ರವಾಗಿದೆ. ಮೂಲಗಳ ಪ್ರಕಾರ ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ ಎಟಿಎಂ ಅನ್ನು ಸ್ಥಾಪಿಸಲಾಗಿದ್ದು, ಇದರ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಇದನ್ನೂ ಓದಿ :ಹಣದ ವಿಚಾರಕ್ಕೆ ಜಗಳ; ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ಚಟ್ಟ ಕಟ್ಟಿದ ಖದೀಮ
ಭಾರತೀಯ ರೈಲ್ವೆಯ ಭುಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ನಡುವಿನ ಸಹಯೋಗದೊಂದಿಗೆ ಈ ಎಟಿಎಂ ಸ್ಥಾಪಿಸಲಾಗಿದ್ದು, ಪ್ರಯಾಣದ ಉದ್ದಕ್ಕೂ ಯಂತ್ರವು ಸುಗಮವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಪ್ರಯೋಗವು ಯಶಸ್ವಿಯಾಗಿ ನಡೆಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.