Saturday, April 19, 2025

ಬೆಂಗಳೂರಿನಲ್ಲಿ ಅನಿರುದ್ಧ್ ಮ್ಯೂಸಿಕ್ ಹಬ್ಬ; 60 ನಿಮಿಷದಲ್ಲೇ ಟಿಕೆಟ್ ಸೋಲ್ಡ್ ಔಟ್ !

ಬೆಂಗಳೂರು : ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರಸ್ತುತಪಡಿಸುತ್ತಿರುವ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬ ಬೆಂಗಳೂರಿನಲ್ಲಿ ಮೇ 31ರಂದು ನಡೆಯಲಿದೆ. ದುಬೈ, ಆಸ್ಟ್ರೇಲಿಯಾ. ಅಮೆರಿಕ, ಪ್ಯಾರಿಸ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಇದೇ ಹುಕುಂ ಟೂರ್ ಮೊತ್ತ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದೆ.

ಮೇ 31ರಂದು ಟೆರಾಫಾರ್ಮ್ ಅರೇನಾದಲ್ಲಿ ಅನಿರುದ್ದ ಮ್ಯೂಸಿಕ್​​ ಕನ್ಸರ್ಟ್​ ನಡೆಯಲಿದ್ದು. ಮೊದಲ ಬಾರಿಗೆ ಸಿಲಿಕಾನ್​ ಸಿಟಿಯಲ್ಲಿ ಅನಿರುದ್ ಮ್ಯೂಸಿಕ್​ ಜಾತ್ರೆ ಮಾಡಲು ರೆಡಿಯಾಗಿದ್ದಾರೆ. ಈ ಮ್ಯೂಸಿಕ್​​ ಕನ್ಸರ್ಟ್​ನನ್ನು ಕೆವಿಎನ್​ ಸಂಸ್ಥೆ ಪ್ರಸ್ತುತಪಡಿಸಿದ್ದು. ಈ ಮ್ಯೂಸಿಕ್​ ಕನ್ಸರ್ಟ್​ ಈಗಾಗಲೇ ಬೃಹತ್​ ದಾಖಲೆ ಕ್ರಿಯೆಟ್​ ಮಾಡಿದೆ.

ಇದನ್ನೂ ಓದಿ :ಉರ್ದು ಒಂದು ಧರ್ಮಕ್ಕೆ ಸಂಬಂಧಿಸಿದ ಭಾಷೆಯಲ್ಲ, ಅದು ಭಾರತದ ಭಾಷೆ; ಸುಪ್ರೀಂಕೋರ್ಟ್

ಅನಿರುದ್ಧ್ ಅವರ ‘ಹುಕುಂ ಟೂರ್ ಬೆಂಗಳೂರು’ ಅವತರಣಿಕೆಯ 16 ಸಾವಿರಕ್ಕೂ ಅಧಿಕ ಟಿಕೆಟ್​ಗಳು ಕೇವಲ 60 ನಿಮಿಷದಲ್ಲೇ ಮಾರಾಟವಾಗಿದೆ ʼ ಅಂತ ಕೆವಿಎನ್ ಸಂಸ್ಥೆ ನಿರ್ಮಾತೃ ವೆಂಕಟ.ಕೆ.ನಾರಾಯಣ ಖಚಿತಪಡಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಜೆಗೆ ಕಾದಿದ್ದ ಸಿಲಿಕಾನ್ ಸಿಟಿಯ ಮಂದಿ, ವೇಗವಾಗಿ ಟಿಕೆಟ್​ಗಳನ್ನು ಖರೀದಿಸಿದ್ದಾರೆ. ಬೀಸ್ಟ್ ಮ್ಯೂಸಿಕ್ ಮೂಡ್​ಗೆ ಸಿಲಿಕಾನ್ ಸಿಟಿ ಮಂದಿ ಯಾವ ರೀತಿ ಕುತೂಹಲಕಾರಿಯಾಗಿ ಕಾಯುತ್ತಿದ್ದಾರೆ ಎಂಬುವುದು ಇದರಿಂದ ಗೊತ್ತಾಗುತ್ತಿದೆ.

RELATED ARTICLES

Related Articles

TRENDING ARTICLES