Wednesday, April 16, 2025

ಅಧಿಕೃತವಾಗಿಯೇ ಅನೌನ್ಸ್ ಆಯ್ತು ಕೆಜಿಎಫ್ 3 ಸಿನಿಮಾ; ಹೊಂಬಾಳೆ ಸಂಸ್ಥೆ ಕೊಟ್ಟ ಸುಳಿವೇನು..?

ಯಶ್ ಅವರ ಬದುಕು ಬದಲಿಸಿದ ಸಿನಿಮಾ ಕೆಜಿಎಫ್ ಚಾಪ್ಟರ್ 1 ಆ ಸಿನಿಮಾ ಮೂಲಕ ಯಶ್ ಅವರು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದರು. ಬಳಿಕ ಬಂದ ‘ಕೆಜಿಎಫ್: ಚಾಪ್ಟರ್​ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿತು ಈಗ ಚಾಪ್ಟರ್​-3ಗೆ ಅಧಿಕೃತವಾಗಿ ಅನೌನ್ಸ್​ ಆಗಿದೆ. ಹಾಗಾದ್ರೇ ಕೆಜಿಎಫ್​ ಚಾಪ್ಟರ್​-3 ಬಗ್ಗೆ ಒಂದಷ್ಟು ಡಿಟೇಲ್ಸ್​ ಹೇಳ್ತಿವಿ ಈ ಸ್ಟೋರಿ ನೋಡಿ

ಬ್ಲಾಕ್‌ಬಸ್ಟರ್ ‘KGF’ ಚಾಪ್ಟರ್-2 ಸಿನಿಮಾ ಇದೀಗ 3 ವರ್ಷ ಪೂರೈಸಿದೆ. ಸ್ಪೆಷಲ್ ವಿಡಿಯೋ ಮೂಲಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಇದನ್ನು ಮೆಲುಕು ಹಾಕಿದೆ. ಜೊತೆಗೆ KGF ಚಾಪ್ಟರ್-3 ಬಗ್ಗೆ ಸುಳಿವು ಕೊಟ್ಟಿದೆ. ಈ ಸ್ಪೇಷಲ್​ ವಿಡಿಯೋ ಕೊನೆಗೆ ‘KGF’ ಚಾಪ್ಟರ್ -3 ಪೋಸ್ಟರ್ ಹಾಕಿ ‘ಸೀ ಯೂ ಸೂನ್’ ಎಂಬ ರಾಕಿ ಡೈಲಾಗ್ ಹಾಕಲಾಗಿದೆ. ಆ ಮೂಲಕ ಆದಷ್ಟು ಬೇಗ ಚಾಪ್ಟರ್ -3 ಸಿನಿಮಾ ಶುರುವಾಗುತ್ತದೆ ಎನ್ನುವ ಸುಳಿವು ಕೊಟ್ಟಿದೆ ಚಿತ್ರತಂಡ.

ಇದನ್ನೂ ಓದಿ :ಮುಡಾ ಪ್ರಕರಣ ​​: ಲೋಕಾಯುಕ್ತ ತನಿಖೆ ಮುಂದುವರಿಸಲು ಕೋರ್ಟ್​ ಆದೇಶ

ಪ್ರಶಾಂತ್ ನೀಲ್ ಮೊದಲಿಗೆ ‘KGF’ ಕಥೆಯನ್ನು ಒಂದು ಸಿನಿಮಾ ಮಾಡಲು ಮುಂದಾಗಿದ್ದರು. ಸಿನಿಮಾ ಕೆಲಸಗಳು ನಡೆಯುತ್ತಿದ್ದಂತೆ ಅದನ್ನು 2 ಭಾಗಗಳಾಗಿ ಮಾಡಬಹುದು ಎಂದು ಚಿತ್ರತಂಡಕ್ಕೆ ಅನಿಸಿತ್ತು. ಯಶ್ ಈ ವಿಚಾರದಲ್ಲಿ ಬಹಳ ಉತ್ಸುಕತೆ ತೋರಿಸಿದ್ದರು. ನಿರ್ದೇಶಕರು, ನಿರ್ಮಾಪಕರು ಎಲ್ಲರನ್ನು ಒಪ್ಪಿಸಿದ್ದರು. ಹಾಗಾಗಿ ರಾಕಿಭಾಯ್ ಕಥೆಯನ್ನು ಎರಡೂ ಭಾಗಗಳಾಗಿ ಮಾಡುವ ಪ್ರಯತ್ನ ನಡೀತು. ಬಾಲಿವುಡ್ ವಿತರಕ ಅನಿಲ್ ತದಾನಿ ತಂಡದ ಜೊತೆ ಕೈಜೋಡಿಸಿದರು.ಹೀಗೆ ಸಿನಿಮಾ ದೊಡ್ಡದಾಗುತ್ತಾ ಈಗ ಮೂರನೇ ಭಾಗದ ಹೊಸ್ತಿಲಿಗೆ ಬಂದು ನಿಂತಿದೆ.

ತಾಯಿ ಆಸೆ ಈಡೇರಿಸುವುದರೊಂದಿಗೆ ರಾಕಿಭಾಯ್ ಕಥೆ ಮುಗಿಯಿತು ಎಂದು ಎಲ್ಲರೂ ಅಂದುಕೊಂಡರು. ರಾಕಿ ಸತ್ತಮೇಲೆ ಕಥೆ ಏನಿದೆ? ಎನ್ನುವುದು ಎಲ್ಲರ ಲೆಕ್ಕಾಚಾರ ಆಗಿತ್ತು. ಆದರೆ ಅದನ್ನು ಸ್ಪಷ್ಟವಾಗಿ ತೋರಿಸದೇ ಚಾಪ್ಟರ್‌- 2 ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್ ಇಟ್ಟು ಚಾಪ್ಟರ್‌- 3 ಬಗ್ಗೆ ಕುತೂಹಲ ಹುಟ್ಟುಹಾಕಿತ್ತು ಚಿತ್ರತಂಡ. ಕನ್ನಡ ಸಿನಿರಸಿಕರು ಮಾತ್ರವಲ್ಲ ಪರಭಾಷಿಕರು ಕೂಡ ರಾಕಿಯ ಮುಂದಿನ ಕಥೆಯನ್ನು ನೋಡಲು, ಸಂಭ್ರಮಿಸಲು ಕಾಯುತ್ತಿದ್ದಾರೆ.

ಇದನ್ನೂ ಓದಿ :ಸ್ವಾಮೀಜಿಗಳು, ಜಾತಿ ಸಂಘಟನೆಗಳ ಲೆಕ್ಕಾಚಾರ ಕೇಳಿದ್ರೆ ಜನಸಂಖ್ಯೆ 12 ಕೋಟಿ ಆಗುತ್ತೆ : ಸಚಿವ ಸಂತೋಷ್ ಲಾಡ್​​

ಪ್ರಶಾಂತ್ ನೀಲ್ ಹಾಗೂ ಯಶ್ ಇಬ್ಬರೂ ಈಗ ಪ್ಯಾನ್ ಇಂಡಿಯಾ ಸಿನಿಮಾಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅಷ್ಟು ಬೇಗ ಯಾವುದೇ ಸಿನಿಮಾ ಮುಗಿಯುವುದಿಲ್ಲ. ಇಬ್ಬರೂ ತಮ್ಮ ಕಮೀಟ್‌ಮೆಂಟ್ ಮುಗಿದ ಬಳಿಕ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸದ್ಯ ಸುಳಿವು ಕೊಟ್ಟಿರುವುದು ಗಮನಿಸಿದರೆ ಮುಂದಿನ ವರ್ಷವೇ ಚಾಪ್ಟರ್-3 ಶುರುವಾಗುವ ಸಾಧ್ಯತೆ ದಟ್ಟವಾಗಿದೆ.

RELATED ARTICLES

Related Articles

TRENDING ARTICLES