ಕಾರವಾರ : ಕನ್ನಡದ ಖ್ಯಾತ ನಿರ್ಮಾಪಕ ಉಮಾಪತಿ ಗೌಡ ನಟ ದರ್ಶನ್ ಪರೋಕ್ಷವಾಗಿ ಹರಿಹಾಯ್ದಿದಿದ್ದು. ಕಾರವಾರದ ಸಿದ್ದಾಪುರದ ಹಲಗಡಿಕೊಪ್ಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮಾಪತಿಗೌಡ ನಟ ದರ್ಶನ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕಾರವಾರದ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನೆಗೆ ಆಗಮಿಸಿದ್ದ ಉಮಾಪತಿ ಗೌಡ, ಕಾರ್ಯಕ್ರಮದಲ್ಲಿ ದರ್ಶನ್ ವಿರುದ್ದ ಹರಿಹಾಯ್ದಿದ್ದಾರೆ. ‘ನಾನಿವತ್ತು ಈ ವೇದಿಕೆಯಲ್ಲಿ ನಿಂತಿದ್ದೀನಿ ಅಂದ್ರೆ, ಅದಕ್ಕೆ ಅನೇಕ ಕಷ್ಟಗಳನ್ನ ಎದುರಿಸಿದ್ದೀನಿ. ಅನೇಕ ತಂಟೆ ತಕರಾರುಗಳನ್ನ ಎದುರಿಸಿದ್ದೀನಿ. ಸುಮಾರು ಜನ ಕೇಳ್ತಿದ್ರು, ನೀನು ದೊಡ್ಡವರನ್ನ ಎದುರು ಹಾಕ್ಕೊಂಡು ಏನಪ್ಪಾ ಮಾಡ್ತಿಯಾ ಅಂತ. ಆದರೆ ನಾನು ಯಾರನ್ನೂ ಎದುರು ಹಾಕ್ಕೋಳಲ್ಲ. ನನ್ನವರು ಎದುರು ಹಾಕ್ಕೋಡ್ತಾರೆ ಎಂದು ಹೇಳಿದರು.
ಇದನ್ನೂ ಓದಿ :ಶಾಲ ಕಟ್ಟಡದಲ್ಲಿ ಅಗ್ನಿ ಅವಘಡ; ರಕ್ಷಣೆಗೆ ನೆರವಾಗಿದ್ದ ಭಾರತೀಯರಿಗೆ ಸಿಂಗಾಪುರ ಸರ್ಕಾರ ಧನ್ಯವಾದ
ಮುಂದುವರಿದು ಮಾತನಾಡಿದ ಉಮಾಪತಿ “ನಾವು ಒಳ್ಳೆ ಕೆಲಸ ಮಾಡುತ್ತಿದ್ದರೆ, ನಾವು ಯಾರಿಗೂ ಹೆದರಬೇಕಿಲ್ಲ. ಯಾರೂ ಒಳ್ಳೆ ಕೆಲಸ ಮಾಡುತ್ತಿರುತ್ತಾರೆ ಅವರನ್ನು ನೋಡಿ ಭಯಪಡಬೇಕು. ಆನಾಣು ಯಾವುದೇ ಕಾರಣಕ್ಕೂ, ಯಾವೂದಕ್ಕೂ ಭಯಪಡಲ್ಲ. ನನ್ನ ಭಯ ಬೀಳಿಸೋ ಶಕ್ತಿ ಯಾರಿಗೂ ಇಲ್ಲ. ಸರಿಯಾದ ದಾರಿಯಲ್ಲಿ ಸಂಪಾದನೆ ಮಾಡಿ ಬದುಕುತ್ತಿದ್ದೇನೆ. ಸಾಯೋವರೆಗೂ ಇನ್ನೊಬ್ಬರಿಗೆ ಮಾದರಿಯಾಗಿ ಬದುಕುತ್ತೇನೆ.
ಆದರೆ ಬದುಕಿನಲ್ಲ ಎರಡು ರೀತಿಯ ಜನ ಇರ್ತಾರೆ. ಒಬ್ಬರು ಇನ್ನೊಬ್ಬರಿಗೆ ಮಾದರಿಯಾಗಿ ಬದುಕುತ್ತಾರೆ. ಆದರೆ ಇನ್ನೊಂದು ವರ್ಗ ಬೇರೆಯವರಿಗೆ ಎಚ್ಚರಿಕೆ ಕೊಡುವಂತವರು. ಜೈಲಿಗೆ ಹೋಗಿ ಬಂದವರು, ಇನ್ನೊಬ್ಬರಿಗೆ ತೊಂದರೆ ಕೊಟ್ಟು ಬದುಕುವವರು, ಎಚ್ಚರಿಕೆ ಕೊಡುತ್ತಾರೆ. ನಿಮ್ಮ ಮಕ್ಕಳನ್ನು ಯಾವ ರೀತಿ ಬೆಳೆಸಬೇಕೂ ಎಂಬುದನ್ನು ನೀವು ನಿರ್ಧಾರ ಮಾಡಿ. ನನಗೆ ಬಂದಿರೋ ಸಮಸ್ಯೆಗೆ ನಾನು ಯಾವತ್ತೊ ಸೂಸೈಡ್ ಮಾಡ್ಕೋಬೇಕಿತ್ತು. ಆದರೆ ನಾನು ಯಾವುದಕ್ಕೂ ಭಯಪಟ್ಟಿಲ್ಲ ಎಂದು ಉಮಾಪತಿಗೌಡ ನಟ ದರ್ಶನ್ಗೆ ಪರೋಕ್ಷವಾಗಿ ಟಾಂಗ್ ನೀಡಿದರು.