Saturday, April 12, 2025

ಇಂದಿನಿಂದ ರಾಜ್ಯದಲ್ಲಿ ಒಂದು ವಾರಗಳ ಕಾಲ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ಒಂದು ವಾರಗಳ ಕಾಲ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು. ಏಪ್ರಿಲ್ 12ರಿಂದ 18ರವರೆಗೆ ವರುಣ ಆರ್ಭಟಿಸಲಿದ್ದಾನೆ.

ಏಪ್ರಿಲ್ ಮೊದಲ ವಾರದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿದಿದ್ದು. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರೀಲ್​ ಮೊದಲ ವಾರದಲ್ಲಿ ರಾಜ್ಯದ 25 ಜಿಲ್ಲೆಗಳಲ್ಲಿಅತ್ಯಧಿಕ ಮಳೆಯಾಗಿದ್ದು, 3 ಜಿಲ್ಲೆಗಳಲ್ಲಿ ಸಾಮಾನ್ಯ, ಒಂದು ಜಿಲ್ಲೆಯಲ್ಲಿ ಅತಿ ಕಡಿಮೆ ಮತ್ತು ಒಂದು ಜಿಲ್ಲೆಯಲ್ಲಿ ಮಳೆಯಾಗಿಲ್ಲ. ವಾಡಿಕೆ ಪ್ರಕಾರ ಏಪ್ರೀಲ್​ 4.7 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಆದರೆ ಸದ್ಯ 19.1 ಮಿ ಮೀ. ಮಳೆಯಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ವಾಡಿಕೆಯ ಪ್ರಕಾರ 4.7 ಮಿ.ಮೀ. ಮಳೆಯಾಗಬೇಕಿತ್ತು. 18.1 ಮಿ.ಮೀ ಮಳೆಯಾಗಿದೆ,
ಉತ್ತರ ಒಳನಾಡಿನಲ್ಲಿ 3.8 ಮಿ ಮೀ ಮಳೆ ಬದಲಿಗೆ 13.9 ಮಿ ಮೀ ಹಾಗೂ ದಕ್ಷಿಣ ಒಳನಾಡಿನಲ್ಲಿ 5.5 ಮಿ ಮೀ. ಬದಲಿಗೆ 23.8 ಮಿ ಮೀ. ಮಳೆಯಾಗಿದೆ.

ಇದನ್ನೂ ಓದಿ :ದೆಹಲಿ ಲಿಕ್ಕರ್​ ಹಗರಣಕ್ಕಿಂತ ದೊಡ್ಡ ಹಗರಣ ರಾಜ್ಯದಲ್ಲಿ ನಡೆದಿದೆ ; ಪಿ.ರಾಜೀವ್​

ಏಪ್ರಿಲ್‌ 12 ರಿಂದ 18 ರವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಏಪ್ರಿಲ್‌ 12 ರಂದು ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ವಿಜಯಪುರ,
ಏಪ್ರಿಲ್‌ 13ರಂದು ಬೆಳಗಾವಿ ಮತ್ತು ರಾಯಚೂರು. ಏಪ್ರಿಲ್‌ 14 ರಿಂದ 16 ರವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ

RELATED ARTICLES

Related Articles

TRENDING ARTICLES