ಬಾಗಲಕೋಟೆ : ಮಾಜಿ ಶಾಸಕ ಪಿ.ರಾಜೀವ, ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ವಿರುದ್ದ ವಾಗ್ದಾಳಿ ನಡೆಸಿದ್ದು. ರಾಜ್ಯ ಸರ್ಕಾರದ ಮೇಲೆ ಮತ್ತೊಂದು ದೊಡ್ಡ ಹಗರಣದ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ದೆಹಲಿ ಲಿಕ್ಕರ್ ಹಗರಣಕ್ಕಿಂತ ದೊಡ್ಡ ಹಗರಣ ನಡೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್,ಬಿ ತಿಮ್ಮಾಪುರ ಬಗ್ಗೆ ಮಾತನಾಡಿದ ಮಾಜಿ ಶಾಸಕ ರಾಜೀವ್ ‘ರಾಜ್ಯ ಸರ್ಕಾರ ರೈತ,ದಲಿತ, ಬಡವರ ಪಾಲಿಗೆ, ತೆರಿಗೆ ಪಾವತಿದಾರರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ತಿಮ್ಮಾಪುರ ತಮ್ಮ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ. ದಲಿತ ಸಮುದಾಯದಿಂದ ಬಂದವರು ನೀವು,
ಎಷ್ಟು ಜನ ದಲಿತರಿಗೆ ಗಂಗಾ ಕಲ್ಯಾಣ, ಭೂಮಿ ಕೊಡಿಸಿದ್ದೀರಿ ? ಮೊರಾರ್ಜಿ ವಸತಿ ಶಾಲೆ ಕಟ್ಟಿದ್ದೀರಿ, ಎಷ್ಟು ಪದವಿ, ಡಿಗ್ರಿ ಕಾಲೇಜ್ ತಂದಿದ್ದೀರಿ?. ನಿಮ್ಮ ಸಾಧನೆ ಶೂನ್ಯ.
ಸಚಿವ ತಿಮ್ಮಾಪೂರ ಸರಾಯಿ ಮಾರಾಟದಲ್ಲಿ ಪಾರ್ಟರ್ ಶಿಪ್ ನಲ್ಲಿ ಬ್ಯುಜಿ ಆಗಿದ್ದಾರೆ. ಸಚಿವ ಸ್ಥಾನ ಹೋದ ಮೇಲೂ ನನ್ನ ಆದಾಯ ನಿಲ್ಲಬಾರದೆಂದು, ಆದಾಯ ಕಡಿಮೆ ಆಗಬಾರದೆಂದು ಸಚಿವರು, ಅವರ ಕುಟುಂಬ ಬ್ಯೂಸಿ ಆಗಿದ್ದಾರೆ. ಇನ್ಮುಂದೆ ರಾಜ್ಯದಲ್ಲಿ ಯಾರೇ ಸರಾಯಿ ಕುಡಿದ್ರೂ ಇವರ ಅಕೌಂಟ್ಗೆ ದುಡ್ಡು ಬರಬೇಕು.
ಯಾರೇ ಸರಾಯಿ ಕುಡಿದರೆ ಅದು ತಿಮ್ಮಾಪುರ ಮನೆಗೆ ಹಣ ಬರುವ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ :ಗುಂಡಿಯ ವಿಷ್ಯ, ಬ್ಯಾಡವೋ ಶಿಷ್ಯ; ಹಾಡು ಹೇಳುತ್ತ ಪ್ರತಿಭಟನೆ ಮಾಡಿದ ನಗರವಾಸಿಗಳು
ದೆಹಲಿ ಲಿಕ್ಕರ್ ಹಗರಣಕ್ಕಿಂತ ದೊಡ್ಡ ಹಗರಣ ನಡೆಯುತ್ತಿದೆ
ಮುಂದುವರಿದು ಮಾತನಾಡಿದ ಪಿ.ರಾಜೀವವ “ದೆಹಲಿಯ ಲಿಕ್ಕರ್ ಹಗರಣಕ್ಕಿಂತ ದೊಡ್ಡ ಹಗರಣದಲ್ಲಿ ಸಚಿವರು ಹಾಗೂ ಅವರ ಕುಟುಂಬ ಶಾಮೀಲಾಗಿದೆ. ಅಬಕಾರಿ ಹಗರಣ ದೊಡ್ಡ ಮಟ್ಟದಲ್ಲಿ ನಡೆದಿದೆ.
ಕಚೇರಿಯಲ್ಲಿ ಬೋರ್ಡ್ ಹಾಕಿಲ್ಲ ಅನ್ನೋದು ಬಿಟ್ರೆ ಅಧಿಕೃತವಾಗಿ ಎಲ್ಲರ ಮೈಂಡ್ನಲ್ಲಿ ರೇಟ್ ಫಿಕ್ಸ್ ಮಾಡ್ಸಿದ್ದಾರೆ.
ಜಂಟಿ ಆಯುಕ್ತರ ಟ್ರಾನ್ಸಫರ್ಗೆ 3 ಕೋಟಿ. ಡೆಪ್ಯುಟಿ ಕಮೀಷನರ್ ಟ್ರಾನ್ಸಪರ್ಗೆ 1.5 ಕೋಟಿ, ಸಿಎಲ್ 7 ಟ್ರಾನ್ಸಪರ್ಗೆ 50 ಲಕ್ಷ. ಬಾರ್ ಲೈಸನ್ಸ್ ವರ್ಗಾವಣೆಗೆ 75 ಲಕ್ಷ ಈ ರೀತಿಯಾಗಿ ಡೀಲ್ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಯಾವ ಲೈಸನ್ಸ್ ಕ್ಯಾನ್ಸಲ್ ಆಗಿವೆ ಅವರ ಜೊತೆ ತಿಮ್ಮಾಪುರ ಕುಟುಂಬ ಶಾಮೀಲಾಗಿದೆ. ಅವುಗಳ ಜೊತೆ ಸಚಿವರ ಕುಟುಂಬ ಡೀಲ್ ಮಾಡಿಕೊಳ್ಳುತ್ತಿದೆ. ಅದರಲ್ಲಿ ಪಾಲುಗಾರಿಕೆ ತಗೋಳ್ತಾ ಇದೆ. ಅದರಲ್ಲಿ ಸೇರ್ ಹೋಲ್ಡರ್ ಆಗಿ, ನಿಯಮಗಳನ್ನ ಗಾಳಿಗೆ ತೂರಿ, ಅಕ್ರಮವಾಗಿ ಮಂಜುರಾತಿ ಕೊಡ್ತಿದ್ದಾರೆ.
ಇದನ್ನೂ ಓದಿ :ಯತ್ನಾಳ್ ಹತ್ಯೆಗೆ ಸಂಚು, ಮತ್ತೊಂದು ವಿಡಿಯೋ ಬಹಿರಂಗ: Z ಕ್ಯಾಟಗರಿ ಭದ್ರತೆ ನೀಡಲು ಮೋದಿಗೆ ಮನವಿ
ಒಂದು ದಾಖಲೆ ಬಿಡುಗಡೆ ಕೊಡ್ತೀನಿ, ರಾಯಭಾಗ ತಾಲೂಕಿನ ರತ್ನಾ ಬಾರ್ ಆ್ಯಂಡ್ ರೆಸ್ಟೊರೆಂಸ್ಟ್ಗೆ ಅರ್ಜಿ ಹಾಕ್ತಾರೆ. ಅದು ರೆಸಿಡೆನ್ಸಿಯಲ್ ಏರಿಯಾದಲ್ಲಿ ಇರೋದ್ರಿಂದ ಅದನ್ನ ರಿಜೆಕ್ಟ್ ಮಾಡ್ತಾರೆ. ಬಳಿಕ ಅವರ ಮಗ ವಿನಯ ತಿಮ್ಮಾಪುರ ಪಾಲುದಾರರಾಗಿ ಡೀಲ್ ಮಾಡಿಕೊಂಡು 23 ಪರ್ಸೆಂಟ್ ಇಟ್ಟುಕೊಂಡಿದ್ದಾರೆ. ಯಾವ ಅಧಿಕಾರಿ ಅರ್ಜಿ ರಿಜೆಕ್ಟ್ ಮಾಡಿದ್ದರೋ ಅವರ ಮೇಲೆ ಒತ್ತಡ ಹಾಕುತ್ತಾರೆ. ಮಾಡಲ್ಲ ಎಂದರೆ ಅವರನ್ನು ಅಮಾನತು ಮಾಡುತ್ತಾರೆ.
ರಾಜ್ಯಾದ್ಯಂತ ಕ್ಯಾನ್ಸಲ್ ಆದ ಸಾವಿರಾರು ಬಾರ್ ಲೈಸನ್ಸ್ಗಳಿಗೆ ಮರುಜೀವ ನೀಡಿದ್ದಾರೆ. ಅಲ್ಲಿಯ ಅಧಿಕಾರಿಗಳನ್ನ ಹೆದರಿಸಿದ್ದಾರೆ. ಇಡೀ ದೇಶದಲ್ಲಿ ಇಷ್ಟು ದೊಡ್ಡ ಭ್ರಷ್ಟಾಚಾರ ಎಲ್ಲೂ ಆಗಿಲ್ಲ. ದೆಹಲಿ ಹಗರಣಕ್ಕಿಂತ ಮೂರು ಪಟ್ಟು ಹಣ ವರ್ಗಾವಣೆ ಆಗಿದೆ. ಇಂಚಿಂಚು ಮಾಹಿತಿ ಇದ್ದರೂ ಸಿಎಂ ಸಿದ್ದು ಈ ಸಚಿವರನ್ನ ವಜಾ ಮಾಡಲಿಲ್ಲ.
ರಾಜ್ಯದ ಜನರು ಸಂಶಯ ವ್ಯಕ್ತಪಡಿಸ್ತಿದ್ದಾರೆ. ತಿಮ್ಮಾಪುರ ಹಣದಲ್ಲಿ ಸಿದ್ದುಗೆ ಎಷ್ಟು ಪಾಲು ಹೋಗ್ತಿದೆ?
ಸರ್ಕಾರಕ್ಕೆ ಒತ್ತಾಯ ಮಾಡ್ತೇನೆ, ತಕ್ಷಣ ಸಚಿವರನ್ನ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಎಸ್ಐಟಿ ಕ್ಲೀನ್ ಚೀಟ್ ಕೊಡಲು ಇರುವ ಸಂಸ್ಥೆ. ಅದಕ್ಕೆ ನಿವೃತ್ತ ನ್ಯಾಯಾಧಿಶರ ನೇತೃತ್ವದಲ್ಲಿ ತನಿಖೆ ನಡೆಸಿ. ಇಲ್ಲದಿದ್ದರೆ ಈ ಎಲ್ಲಾ ಭ್ರಷ್ಟಚಾರಕ್ಕೆ ಸಿದ್ದರಾಮಯ್ಯರ ಕಾರಣರಾಗುತ್ತಾರೆ ಎಂದು ಹೇಳಿದರು.