Wednesday, April 16, 2025

ಕೋರ್ಟ್​ಗೆ ಚಕ್ಕರ್​, ಸಿನಿಮಾಗೆ ಹಾಜರ್​; ಶಿಷ್ಯನ ಜೊತೆ ಸಿನಿಮಾ ವೀಕ್ಷಿಸಿದ ದರ್ಶನ್​

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​ ಕೋರ್ಟ್​ ವಿಚಾರಣೆಗೆ ಗೈರಾಗಿ, ನೆಚ್ಚಿನ ಗೆಳೆಯ, ಶಿಷ್ಯ ಧನ್ವೀರ್​ ಅಭಿನಯದ ವಾಮನ ಸಿನಿಮಾ ವೀಕ್ಷಿಸಿದ್ದಾರೆ. ದರ್ಶನ್​ ನಡೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು. ನ್ಯಾಯಾಲಯಕ್ಕೆ ಬರುವುದಕ್ಕೆ ಅಡ್ಡಿಯಾಗಿದ್ದ ಬೆನ್ನು ನೋವು, ಸಿನಿಮಾ ವೀಕ್ಷಣೆಗೆ ಅಡ್ಡಿಯಾಗಲಿಲ್ಲವೇ ಎಂಬ ಪ್ರಶ್ನೆಗಳು ಮೂಡತೊಡಗಿವೆ.

ಬುಧವಾರ ರಾತ್ರಿ ಜಿಟಿ ಮಾಲ್‌ನಲ್ಲಿ ವಾಮನ ಚಿತ್ರದ ವಿಶೇಷ ಶೋ ಆಯೋಜಿಸಲಾಗಿತ್ತು. ಈ ಶೋ ವೀಕ್ಷಿಸಲು ದರ್ಶನ್‌ ರಾತ್ರಿ 8 ಗಂಟೆಯ ವೇಳೆಗೆ ಮಾಲ್‌ಗೆ ಆಗಮಿಸಿದ್ದರು. ಬೆನ್ನು ನೋವನ್ನು ಲೆಕ್ಕಿಸದೇ ಧನ್ವೀರ್​ ಅಭಿನಯದ ಸಿನಿಮಾವನ್ನು ದರ್ಶನ್‌ ಸುಮಾರು ಮೂರು ಗಂಟೆಗಳ ಕಾಲ ಕುಳಿತು ವೀಕ್ಷಿಸಿದ್ದಾರೆ. ದರ್ಶನ್​ನ ಈ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ :ಬಿರು ಬೇಸಿಗೆಯಲ್ಲಿ ಜನರಿಗೆ ಬ್ಲಾಂಕೆಟ್​ ವಿತರಿಸಿದ ಬಿಹಾರದ ಕ್ರೀಡಾ ಸಚಿವ

ಏಕೆಂದರೆ ಏ.8 ರಂದು ದರ್ಶನ್‌ 57ನೇ ಸಿಸಿಹೆಚ್ ನ್ಯಾಯಾಲಯದ  ವಿಚಾರಣೆಗೆ ಹಾಜರಾಗಲಿಲ್ಲ. ವಿಚಾರಣೆ ಸಂದರ್ಭದಲ್ಲಿ ವಕೀಲರು, ದರ್ಶನ್‌ ಅವರಿಗೆ ಬೆನ್ನು ನೋವಿದೆ. ಹೀಗಾಗಿ ವಿಚಾರಣೆಗೆ ಬರಲು ವಿನಾಯಿತಿ ಕೋರಿದ್ದರು. ಈ ವೇಳೆ ನ್ಯಾಯಾಧೀಶರು ವಿಚಾರಣೆಗೆ ಗೈರಾಗದಂತೆ ಸೂಚನೆ ನೀಡಿ. ವಿಚಾರಣೆ ಇದ್ದಾಗ ಆರೋಪಿಗಳು ಹಾಜರಾಗಲೇಬೇಕು ಎಂದು ತಿಳಿಸಿದ್ದರು.

ಆದರೆ ಇದೀಗ ಮಾರನೇ ದಿನವೇ ನಟ ದರ್ಶನ್​ ಸ್ನೇಹಿತ ಧನ್ವೀರ್​ ಅಭಿನಯದ ವಾಮನ ಸಿನಿಮಾ ವೀಕ್ಷಿಸಲು ಜಿಟಿ ಮಾಲ್​ಗೆ ಭೇಟಿ ನೀಡಿದ್ದು. ಇಲ್ಲಿ ಬೆನ್ನು ನೋವಿರಲಿಲ್ಲವೇ ಎಂದು ಕೇಳಲಾಗುತ್ತಿದೆ. ಜೊತೆಗೆ ಕೊಲೆ ಆರೋಪಿ ಚಿಕ್ಕಣ್ಣನನ್ನು ದರ್ಶನ್​ ಭೇಟಿಯಾಗಿದ್ದು. ಇದು ಸಾಕ್ಷಿಯ ಮೇಲೆ ಪ್ರಭಾವ ಬೀರುವುದಲ್ಲವೇ ಎಂದು ಕೇಳಲಾಗುತ್ತಿದೆ.

RELATED ARTICLES

Related Articles

TRENDING ARTICLES