ಬೆಂಗಳೂರು : ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು 29 ವರ್ಷದ ಬಾಹರ್ ಅಸ್ಮಾ ಎಂದು ಗುರುತಿಸಲಾಗಿದೆ.
ಬೆಂಗಳೂರಿನ, ಹೆಬ್ಬಾಳದ ಕನಕನಗರದಲ್ಲಿ ಘಟನೆ ನಡೆದಿದ್ದು. ಬಾಹರ್ ಅಸ್ಮಾ ಎಂಬಾಕೆ ಕಳೆದ ಎರಡು ವರ್ಷಗಳ ಹಿಂದೆ ಬಶೀರ್ ವುಲ್ಲಾ ಎಂಬಾತನ ಜೊತೆ ಮದುವೆಯಾಗಿದ್ದಳು. ಆದರೆ ಪತಿ ಬಶೀರ್ ವುಲ್ಲಾಗೆ ಬೇರೆ ಯುವತಿ ಜೊತೆ ಅನೈತಿಕ ಸಂಬಂಧವಿದ್ದ ಬೇಸತ್ತ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುವತಿ ಕುಟುಂಬಸ್ಥರು ಇದನ್ನು ಕೊಲೆ ಎಂದು ಆರೋಪಿಸಿದ್ದು. ಬಶೀರ್ ಅಸ್ಮಾಳ ಕೊಲೆ ಮಾಡಿ ನಂತರ ಆಕೆಯನ್ನು ನೇಣು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ :ಆಣೆ ಪ್ರಮಾಣಕ್ಕೆ ಸಿದ್ದ; ಚೆಲುವರಾಯಸ್ವಾಮಿ ಎಷ್ಟು ಮನೆ ಹಾಳು ಮಾಡಿದ್ದಾರೆ ಗೊತ್ತು: ಹೆಚ್ಡಿಕೆ
ಘಟನೆ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿ ಪತಿ ಬಶೀರ್ ಅಸ್ಮಾಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.