Friday, April 25, 2025

ಮಯನ್ಮಾರ್ ಭೂಕಂಪ; ಸಾ*ವಿನ ಸಂಖ್ಯೆ 3085ಕ್ಕೆ ಏರಿಕೆ..!

ಮ್ಯಾನ್ಮಾರ್‌ನಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ ಧರೆಗುರುಳಿದ ಕಟ್ಟಡಗಳ ಅವಶೇಷಗಳಡಿ ಸಿಲುಕಿದವರನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರಿದಿದೆ. ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 3,085ಕ್ಕೆ ಏರಿದ್ದು, ಬದುಕುಳಿದವರಿಗೆ ವೈದ್ಯಕೀಯ ಸೇರಿದಂತೆ ಇನ್ನಿತರ ಸೌಕರ್ಯ ಕಲ್ಪಿಸಿಕೊಡಲು ಮಾನವೀಯ ಸಂಘಟನೆಗಳಿಗೆ ದೊಡ್ಡ ಸವಾಲು ಎದುರಾಗಿದೆ ಎಂದು ಸೇನಾ ಸರ್ಕಾರ ತಿಳಿಸಿದೆ.

ಸರ್ಕಾರ ಬಿಡುಗಡೆ ಮಾಡುತ್ತಿರುವ ಅಂಕಿ ಅಂಶಕ್ಕಿಂತಲೂ ಹೆಚ್ಚು ಸಾವು-ನೋವು ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಬಹುತೇಕ ಕಡೆಗಳಲ್ಲಿ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದು ಎನ್ನಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಾಥಮಿಕ ಪರಿಶೀಲನೆ ಪ್ರಕಾರ, ನಾಲ್ಕು ಆಸ್ಪತ್ರೆಗಳು ಮತ್ತು ಒಂದು ಆರೋಗ್ಯ ಕೇಂದ್ರಕ್ಕೆ ಸಂಪೂರ್ಣ ಹಾನಿಯಾಗಿದೆ.

ಇದನ್ನೂ ಓದಿ : ಯುವ ವಕೀಲೆಗೆ ಈಡಿಯಟ್​ ಎಂದ ಜಡ್ಜ್​ ವಿರುದ್ದ ಪ್ರತಿಭಟನೆಗೆ ಕುಳಿತ ವಕೀಲರು..!

ಅಲ್ಲದೆ, 32 ಆಸ್ಪತ್ರೆಗಳು ಮತ್ತು 18 ಆರೋಗ್ಯ ಕೇಂದ್ರಗಳು ಭಾಗಶಃ ಹಾನಿಗೀಡಾಗಿವೆ. ಹಲವು ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭೂಕಂಪದ ಪ್ರಬಲ ಹೊಡೆತಕ್ಕೆ ಸಿಲುಕಿರುವ ಕಡೆಗಳಲ್ಲಿ ಜನರಿಗೆ ಚಿಕಿತ್ಸೆ ಪಡೆಯುವುದು ದುಸ್ತರವಾಗಿದೆ. ಗಾಯಗೊಂಡಿರುವ ಸಾವಿರಾರು ಮಂದಿ ಮತ್ತು ಕಾಯಿಲೆ ಪೀಡಿತರಾದವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು WHO ಹೇಳಿದೆ.

RELATED ARTICLES

Related Articles

TRENDING ARTICLES