ಬೆಂಗಳೂರು : ಬೆಲೆಏರಿಕೆ ವಿರುದ್ದ ರಾಜ್ಯ ಬಿಜೆಪಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು. ಈ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭಾಗಿಯಾಗಿದ್ದಾರೆ. ಇದರ ಕುರಿತು ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದು. ಯಡಿಯೂರಪ್ಪ ಸಾಯೋಕು ಮುನ್ನ ವಿಜಯೇಂದ್ರನನ್ನ ಸಿಎಂ ಮಾಡೋಕೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಬಿಎಸ್ವೈ ಮೇಲೆ ಹರಿಹಾಯ್ದಿದ್ದು. ಯಡಿಯೂರಪ್ಪ ತನ್ನ ಮಗನ ರಕ್ಷಣೆಗಾಗಿ ಬೆಲೆ ಏರಿಕೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರು ಬಿಜೆಪಿ ಸಲುವಾಗಿ ಏನು ಪ್ರತಿಭಟನೆ ಮಾಡ್ತಿಲ್ಲಾ. ಯಡಿಯೂರಪ್ಪ ಸಾಯೋಕೆ ಮುನ್ನ ವಿಜಯೇಂದ್ರನನ್ನ ಸಿಎಂ ಆಗಿ ನೋಡಬೇಕು ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ :ಹೆಂಡತಿ ಕೊ*ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿ ಮುಂದೆ, ಪ್ರತ್ಯಕ್ಷವಾದ ಹೆಂಡತಿ..!
ಮುಂದುವರಿದು ಮಾತನಾಡಿದ ಶಾಸಕ ಯತ್ನಾಳ್ ‘ಕರ್ನಾಟಕವನ್ನು ಇನ್ನಷ್ಟು ಲೂಟಿ ಮಾಡಬೇಕು, ಕೇವಲ ಮಾರಿಷಸ್ ಮತ್ತು ದುಬೈನಲ್ಲಿ ಮಾತ್ರ ಈಗ ಆಸ್ತಿ ಇದೆ. ಇಡೀ ಜಗತ್ತಿನಲ್ಲಿ ಆಸ್ತಿ ಮಾಡಬೇಕು ಎಂದು ಈ ಇಳಿ ವಯಸ್ಸಿನಲ್ಲೂ ಮನೆಯಲ್ಲಿ ಇರದೆ ಹೋರಾಟ ಮಾಡ್ತಿದ್ದಾರೆ. ಅವರು ಬಡವರ, ರೈತರ ಪರವಾಗಿ ಏನು ಹೋರಾಟ ಮಾಡ್ತಿಲ್ಲಾ, ತಮ್ಮ ಮಗನ ಕುರ್ಚಿ ಗಟ್ಟಿ ಮಾಡೋಕೆ ಯಡಿಯೂರಪ್ಪ ಹೋರಾಟದಲ್ಲಿ ಭಾಗಿಯಾಗಿದ್ದಾರೆ.