Tuesday, April 1, 2025

17 ವರ್ಷಗಳ ಬಳಿಕೆ ಚೆಪಾಕ್​ನಲ್ಲಿ ಆರ್​ಸಿಬಿ ಗೆಲುವು, ವಿಶ್​ ಮಾಡಿದ ಮಲ್ಯ..!

ಚೆನ್ನೈ: ಆರ್​​ಸಿಬಿ ಮತ್ತು ಚೆನೈ ನಡುವಿನ ಹೈವೋಲ್ಟೇಜ್​ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಬೀಗಿದೆ. ಅದರಲ್ಲೂ 18 ವರ್ಷಗಳ ನಂತರ ಚೆನೈನ ಚೆಪಾಕ್​ ಕೋಟೆಯಲ್ಲಿ ಸಿಎಸ್​ಕೆ  ತಂಡವನ್ನು ಸೋಲಿಸುವ ಮೂಲಕ 17 ವರ್ಷಗಳ ಈ ಸಾಧನೆ ಮಾಡಿದೆ. ಇದರ ನಡುವೆ ಬೆಂಗಳೂರು ತಂಡದ ಮಾಜಿ ಮಾಲೀಕ ವಿಜಯ್​ ಮಲ್ಯ ಎಕ್ಷ್​ ಖಾತೆಯಲ್ಲಿ ಆರ್​ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಮಲ್ಯಾ, 18 ವರ್ಷಗಳ ನಂತರ ಚೆಪಾಕ್ ಕೋಟೆಯಲ್ಲಿ ದಕ್ಷಿಣದ ಎದುರಾಳಿ ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಕ್ಕಾಗಿ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದ್ದೀರಿ. ಧೈರ್ಯಶಾಲಿ ಹುಡುಗರೇ, ಇನ್ನೂ ಚೆನ್ನಾಗಿ ಆಟವಾಡಿ ಎಂದು ಶುಭಾಶಯ ತಿಳಿಸಿದ್ದಾರೆ. ಕೆಕೆಆರ್​ ವಿರುದ್ದ ಮೊದಲ ಪಂದ್ಯದಲ್ಲೂ ಆರ್​ಸಿಬಿ ಜಯಗಳಿಸಿದಾಗಲೂ ವಿಜಯ್​ ಮಲ್ಯ ಅಭಿನಂದನೆ ತಿಳಿಸಿದ್ದಾರೆ.

ಇದನ್ನೂ ಓದಿ :ಶ್ರೀ ವಿಶ್ವಾವಸು ನಾಮ ಸಂವತ್ಸರದ ದ್ವಾದಶ ರಾಶಿಗಳ ಫಲಾಫಲಗಳು..!

ನೆನ್ನೆಯ (ಮಾ.28) ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಇಳಿದ ಆರ್​ಸಿಬಿ ತಂಡ 20 ಓವರ್​ಗಳಲ್ಲಿ 7 ವಿಕೆಟ್​ಗಳನ್ನು ಕಳೆದುಕೊಂಡು 196ರನ್​ ಗಳಿಸಿತು. ಈ ಬೃಹತ್​ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ ತಂಡ 20 ಓವರ್​ಗಳಲ್ಲಿ ಕೇವಲ 146ರನ್​ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಆರ್​ಸಿಬಿ 50ರನ್​ಗಳಿಂದ ಚೆಪಾಕ್​ ಅಂಗಳದಲ್ಲಿ ಗೆದ್ದುಬೀಗಿದೆ.

RELATED ARTICLES

Related Articles

TRENDING ARTICLES