ಬೆಂಗಳೂರು : ಡಿಜೆ ಹಳ್ಳಿಯಲ್ಲಿ ಮಾರಕಾಸ್ತ್ರ ಹಿಡಿದು ಪುಂಡರ ವೀಲಿಂಗ್ ಪ್ರಕರಣದಲ್ಲಿ ಪೊಲೀಸರು ಪುಂಡರನ್ನು ಬಂಧಿಸಿ ರೌಡಿ ಶೀಟರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 14 ಮಂದಿಯ ಮೇಲೆ ಡಿ.ಜೆ ಹಳ್ಳಿ ಪೊಲೀಸರು ರೌಡಿ ಶೀಟರ್ ಓಪನ್ ಮಾಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸುಮಾರು 14 ಜನ ಪುಂಡರು 7 ಬೈಕ್ಗಳಲ್ಲಿ ಮಾರಕಾಸ್ತ್ರ ಹಿಡಿದು ರಾಮಮೂರ್ತಿ ನಗರ ರಿಂಗ್ ರಸ್ತೆ, ಓಲ್ಡ್ ಮದ್ರಾಸ್ ರಸ್ತೆಯಲ್ಲಿ ವೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದರು. ಇದೀಗ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಮಾರಕಾಸ್ತ್ರವಿಡಿದು ಅಡ್ಡಾದಿಡ್ಡಿ ಓಡಾಡಿದ್ದ ನಯೀಮ್ ಪಾಷಾ, ಅರಫಾತ್, ಸಾಹೀಲ್, ಅದ್ನಾನ್, ನಂಜಾಮ್ಮದ್, ಆಸೀಫ್, ಸಮೀರ್, ಜುಬೇರ್, ರಿಹಾನ್, ಹುಸೇನ್, ಜುನೇದ್, ಅಯಾನ್, ಆಫ್ತಾಪ್ ಸೇರಿದಂತೆ 14 ಮಂದಿಯ ವಿರುದ್ದ ರೌಡಿ ಶೀಟರ್ ಓಪನ್ ಮಾಡಲಾಗಿದೆ.
ಇದನ್ನೂ ಓದಿ :ಅಭಿವೃದ್ದಿಯಲ್ಲಿ ಭಾರತವನ್ನು ಸೋಲಿಸದಿದ್ದರೆ ನನ್ನ ಹೆಸರನ್ನು ಬದಲಾಯಿಸುತ್ತೇನೆ : ಪಾಕ್ ಪ್ರಧಾನಿ
ಆರೋಪಿಗಳ ಪೋಷಕರನ್ನು ಕರೆಸಿ ವಾರ್ನಿಂಗ್ ನೀಡಿರುವ ಪೊಲೀಸರು. ಪೋಷಕರ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಜೊತೆಗೆ ರಾತ್ರಿ ವೇಳೆ ರಿಂಗ್ ರಸ್ತೆಯ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಅನುಪಾಸ್ಪದವಾಗಿ ಓಡಾಡುವವರ ಮೇಲೆ ನಿಗಾ ಇರಿಸಿದ್ದಾರೆ.