ದೇವನಹಳ್ಳಿ : ಬೆಳ್ಳಂ ಬೆಳಿಗ್ಗೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾದ ಕಾರು ನಡು ರಸ್ತೆಯಲ್ಲಿ ಸುಮಾರು ನಾಲ್ಕೈದು ಬಾರಿ ಪಲ್ಟಿಯಾಗಿದೆ. ಅಪಘಾತದಲ್ಲಿ 20 ವರ್ಷದ ಮೊಹಮ್ಮದ್ ಯೂನಿಸ್ ಎಂಬಾತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕತ್ತಿಹೊಸಹಳ್ಳಿ ಬಳಿ ನೆನ್ನೆ ಬೆಳಗ್ಗೆ ಅಪಘಾತ ಸಂಭವಿಸಿದ್ದು. ಧಾರವಾಡದಿಂದ ದೇವನಹಳ್ಳಿಯ ವಿಜಯಪುರಕ್ಕೆ ಬರುವ ವೇಳೆ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಒಟ್ಟು 5 ಜನರು ಪ್ರಯಾಣಿಸುತ್ತಿದ್ದು. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಎಲ್ಲರು ಕಾರಿನಿಂದ ಹಾರಿ ಕೆಳಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಮೊಹ್ಮಮದ್ ಯೂನಿಸ್ ಎಂಬಾತ ಚಿಕಿತ್ಸೆ ಫಲಸದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ದರ್ಶನ್ ವಿರುದ್ದ ಸಾಕ್ಷಿ ಹೇಳುವಂತೆ ಒತ್ತಡ ಹೇರುತ್ತಿದ್ದಾರೆ: ದರ್ಶನ್ ಪರ ವಕೀಲ
ಅಪಘಾತದ ಸಿಸಿಟಿವಿ ದೃಷ್ಯ ವೈರಲ್ ಆಗಿದ್ದು. ಅತಿ ವೇಗದ ಮತ್ತು ನಿರ್ಲಕ್ಷದ ಚಾಲನೆಯೆ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.