ಭೋಪಾಲ್: ಭೋಪಾಲ್‌ನಲ್ಲಿ ಆರಂಭವಾದ ಇನ್ವೆಸ್ಟ್ ಮಧ್ಯಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಸುಮಾರು 15 ನಿಮಿಷ ತಡವಾಗಿ ಬಂದಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಈ ರೀತಿ ಮಾಡಿದ್ದಾಗಿ ಹೇಳಿದ್ದಾರೆ.
ನರೇಂದ್ರ ಮೋದಿ ಸದಾ ಅವರ ಶಿಸ್ತಿನಿಂದಲೇ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಕಾರ್ಯಕ್ರಮವಿರಲಿ ನಿಗಧಿಯಾದ ಸಮಯಕ್ಕೆ ಸರಿಯಾಗಿ ಅವರು ಅಲ್ಲಿರುತ್ತಾರೆ. ಆದರೆ ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಹೂಡಿಕೆದಾರರ ಸಮಾವೇಶಕ್ಕೆ ಪ್ರಧಾನಿ ಮೋದಿ ತಡವಾಗಿ ಆಗಮಿಸಿದ್ದಾರೆ. ತಡವಾಗಿ ಬಂದಿದ್ದಕ್ಕೆ ನರೇಂದ್ರ ಮೋದಿ ಕ್ಷಮೆ ಕೇಳಿದ್ದು, ಲೇಟ್ ಆಗಲು ಕಾರಣವೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ :ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಉಪಾಧ್ಯಕ್ಷನ ಮೇಲೆ ಹಲ್ಲೆ ನಡೆಸಿದ MES ಪುಂಡರು
ವೇದಿಕೆ ಮೇಲೆ ಭಾಷಣ ಮಾಡುವ ವೇಳೆ ಇದನ್ನು ಪ್ರಸ್ತಾಪಿಸಿದ ಮೋದಿ ‘ಇಲ್ಲಿಗೆ ಬರಲು ತಡವಾಗಿದ್ದಕ್ಕಾಗಿ ನಿಮ್ಮೆಲ್ಲರಲ್ಲೂ ನಾನು ಕ್ಷಮೆಯಾಚಿಸುತ್ತೇನೆ. ನಾನು ಇಲ್ಲಿಗೆ ತಲುಪಿದಾಗ, ಇಂದು 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿವೆ ಎಂಬ ವಿಷಯ ನನ್ನ ಗಮನಕ್ಕೆ ಬಂದಿತ್ತು. ಆ ಸಮಯದಲ್ಲಿ ನಾನು ಹೊರಟರೆ ಭದ್ರತಾ ಕಾರಣಗಳಿಗಾಗಿ ರಸ್ತೆಗಳನ್ನು ಮುಚ್ಚಬಹುದು ಮತ್ತು ಮಕ್ಕಳು ಪರೀಕ್ಷೆಗಳಿಗೆ ಹೋಗಲು ತೊಂದರೆಯಾಗುತ್ತದೆ ಅದಕ್ಕೆ ನನ್ನ ವೇಳಾಪಟ್ಟಿಯನ್ನು ಬದಲಾಯಿಸಿಕೊಂಡೆ ಎಂದಿದ್ದಾರೆ.
ಮೋದಿಯ ಈ ತೀರ್ಮಾನಕ್ಕೆ ಮಧ್ಯಪ್ರದೇಶ್ ಮುಖ್ಯಮಂತ್ರಿ ಮೋಹನ್ ಯಾದವ್ ಶ್ಲಾಘಿಸಿದ್ದು. ವಿದ್ಯಾರ್ಥಿಗಳ ಮೇಲೆ ಅವರ ಉಜ್ವಲ ಭವಿಷ್ಯದ ಬಗ್ಗೆ ಪ್ರಧಾನಿ ಮೋದಿ ಸೂಕ್ಷ್ಮವಾಗಿ ಯೋಚಿಸುತ್ತಾರೆ ಎಂದು ಹೇಳಿದ್ದಾರೆ.