Monday, February 24, 2025

500 ರೂಪಾಯಿಗೆ ನಡೆಯಿತು ಭೀಕರ ಕೊ*ಲೆ !

ಹೊಸಕೋಟೆ: ಕೇವಲ 500 ರೂಪಾಯಿಗೆ ಚಾಕುವಿನಿಂದನ ಇರಿದು ಕೊಲೆ ಮಾಡಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು 23 ವರ್ಷದ ಮೋಹಿನ್​ ಎಂದು ಗುರುತಿಸಲಾಗಿದೆ.

ಹೌದು.. ಕೇವಲ 500 ರೂಪಾಯಿಗೆ ಕೊಲೆ ನಡೆದಿದೆ ಎಂದರೆ ನೀವು ನಂಬಲೆಬೇಕು. ನಾವು ಪ್ರತಿದಿನ ಕೊಲೆ, ದರೋಡೆ ಎಂಬೆಲ್ಲಾ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆದರೆ ಈ ಎಲ್ಲಾ ಘಟನೆಗಳ ಹಿಂದೆ ಯಾವುದಾದರೂ ಒಂದು ಬಲವಾದ ಕಾರಣವಿರುತ್ತದೆ. ಕೋಪದ ಕೈಗೆ ಬುದ್ದಿಕೊಟ್ಟು ಇವರು ಕಂಬಿ ಹಿಂದೆ ಬೀಳುತ್ತಾರೆ. ಆದರೆ ಹೊಸಕೋಟೆ ತಾಲೂಕಿನ ಕಟ್ಟಿಗೆನಹಳ್ಳಿ ಗ್ರಾಮದಲ್ಲಿ ಗಾಂಜಾ ತರಲು 500 ರೂಪಾಯಿ ಕೊಟ್ಟಿದ್ದ ಯುವಕ, ಗಾಂಜ ತರದೆ ಮೊಬೈಲ್​ ಸ್ವಿಚ್​ ಆಫ್​ ಮಾಡಿದ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ :ಕುಂಭಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತಳ: 7 ಮಂದಿ ಕನ್ನಡಿಗರ ದುರ್ಮರಣ

ಕೊಲೆಯಾಗಿರುವ ಮೋಹಿನ್​ಗೆ ರೋಷನ್​ ಗಾಂಜ ತರಲು ಎಂದು 500 ರೂಪಾಯಿ ಕೊಟ್ಟಿದ್ದನು. ಮೋಹಿನ್​ ಗಾಂಜ ತರುವುದಾಗಿ ಹೇಳಿ ಹಣ ಪಡೆದು ಮನೆಗೆ ಹೋಗಿದ್ದನು. ಆದರೆ ಮನೆಗೋದ ಮೋಹಿನ್​ ತನ್ನ ಮೊಬೈಲ್​ ಸ್ವಿಚ್​​ ಆಫ್​ ಮಾಡಿಕೊಂಡಿದ್ದನು. ಇದರಿಂದ ಕುಪಿತಗೊಂಡ ರೋಷನ್​ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ತಿರುಮಲ ಶೆಟ್ಟಿಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES