ಥಾಣೆ: ಮಗನನ್ನು ಮದುವೆಯಾಗಿ ಮನೆಯ ದೀಪ ಬೆಳಗಲು ಮನೆಗೆ ಬಂದಿದ್ದ ಸೊಸೆ ಮೇಲೆ ಮಾವ ಹಾಗೂ ಆತನ ಸ್ನೇಹಿತ ಅತ್ಯಾಚಾರವೆಸೆಗಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಘಟನೆ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಆಕೆಗೆ ಇನ್ನು 20 ವರ್ಷದ ಮದುವೆಯಾಗಿ ಹತ್ತಾರು ಕನಸುಗಳನ್ನು ಹೊತ್ತು ತವರು ಮನೆಯನ್ನು ತೊರೆದು ಮತ್ತೊಂದು ಮನೆಯನ್ನು ಬೆಳಗಲು ಎಂದು ಮಾವನ ಮನೆಗೆ ಬಂದಿದ್ದಳು. ಆದರೆ ಮನೆಯಲ್ಲಿದ್ದ 50 ವರ್ಷದ ಮಾವ ಮತ್ತು ಆತನ ಸ್ನೇಹಿತ ಸೊಸೆಯೆಂಬುದನ್ನು ನೋಡದೆ ಅತ್ಯಾಚರವೆಸಗಿದ್ದಾರೆ. ಈ ವಿಷಯವನ್ನು ಯಾರ ಬಳಿಯಾದರೂ ಹೇಳಿದರೆ ಸಂತ್ರಸ್ತೆಯ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ರೀತಿಯಾಗಿ ಬೆದರಿಕೆ ಹಾಕಿ ಸುಮಾರು 15 ದಿನಗಳ ಕಾಲ ಸೊಸೆ ಮೇಲೆ ಮಾವ ಮತ್ತು ಆತನ ಸ್ನೇಹಿತ ಚಿತ್ರಹಿಂಸೆ ನೀಡಿದ್ದು. ಇಬ್ಬರು ಮಲಗಿದ್ದಾಗ ಮಹಿಳೆ ಮನೆಯಿಂದ ತಪ್ಪಿಸಿಕೊಂಡು ನಾರ್ಪೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಇದನ್ನೂ ಓದಿ :ತೋಟದ ಮನೆಗೆ ಬೆಂಕಿ: 5 ಹಸು, 1 ಕರು ಬೆಂಕಿಗಾಹುತಿ !
ಆರೋಪಿಗಳಿಬ್ಬರು ತಲೆ ಮರೆಸಿಕೊಂಡಿದ್ದು. ಪೊಲೀಸ್ ತಂಡ ಅವರಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ನಾರ್ಪೋಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಭರತ್ ಕಾಮತ್ ಮಾಹಿತಿ ನೀಡಿದ್ದಾರೆ. ಮಹಿಳೆ ಮತ್ತು ಆಕೆಯ ಪತಿ ಮಾವನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಜನವರಿ 30 ರಂದು, ಆರೋಪಿಯು ಮಹಿಳೆಯನ್ನು ಆಕೆಯ ಪೋಷಕರ ಬಳಿ ಬಿಡುವ ನೆಪದಲ್ಲಿ ಹೊರಗೆ ಕರೆದೊಯ್ದಿದ್ದ. ಆದರೆ, ಆಕೆಯನ್ನು ತನ್ನ ಸ್ವಂತ ಮನೆಗೆ ಕರೆದೊಯ್ದು, ಅಲ್ಲಿ ಆಕೆಯನ್ನು ಒಂದು ಕೋಣೆಯಲ್ಲಿ ಕಟ್ಟಿಹಾಕಿ ತನ್ನ ಸ್ನೇಹಿತನಿಗೆ ಬರಲು ತಿಳಿಸಿದ್ದ.
ನಂತರ ಆರೋಪಿಗಳಿಬ್ಬರೂ ಸರದಿಯಂತೆ ಆಕೆಯ ಮೇಲೆ ಅತ್ಯಾಚಾರ ಎಸಗಿದರು. ಈ ಮಧ್ಯೆ, ಮಾವ ತನ್ನ ಮಗನಿಗೆ ತನ್ನ ಸೊಸೆಯನ್ನು ಆಕೆಯ ಪೋಷಕರ ಮನೆಯ ಬಳಿ ಬಿಟ್ಟಿರುವುದಾಗಿ ಹೇಳಿದ್ದ. ಆರೋಪಿಗಳು ಮಲಗಿದ್ದಾಗ ಮಹಿಳೆ ಪರಾರಿಯಾಗಿ ತನ್ನ ಪೋಷಕರ ಮನೆಗೆ ತಲುಪಿದ ನಂತರ ಸತ್ಯ ಹೊರಬಂದಿತ್ತು.
ಅಲ್ಲಿಂದ ಆಕೆ ತನ್ನ ಪೋಷಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ನಡೆದಿದ್ದೆಲ್ಲವನ್ನೂ ವಿವರಿಸಿದ್ದಾಳೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 64, 127(4), 351(3), 74, ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.