ಕಳೆದ ಮೂರುವರೆ ದಶಕಗಳಿಂದ ಕಲಾ ಸೇವೆಯನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿರುವ ಶಿವಣ್ಣ ಈಗ ಕೇವಲ ಕರುನಾಡಿಗೆ ಮಾತ್ರ ಸೀಮಿತವಾಗಿಲ್ಲ. ಶಿವಣ್ಣನ ಹವಾ ಈಗ ಪ್ಯಾನ್ ಇಂಡಿಯಾ ಲೆವೆಲ್‌ಗೂ ಮುಟ್ಟಿದೆ.. ಸದ್ಯ ಕ್ಯಾನ್ಸರ್‌ನಿಂದ ಮುಕ್ತಿ ಪಡೆದು ರೆಸ್ಟ್ ಮಾಡ್ತಿರೋ ಶಿವಣ್ಣ ಹೊಸ ಸಿನಿಮಾಗೆ ಸೈನ್ ಹಾಕಿದ್ದಾರೆ ಜೊತೆಗೆ ಹದಿನೈದು ದಿನಗಳ ಕಾಲ್ಶೀಟ್ ಕೂಡ ಕೊಟ್ಟಿದ್ದಾರೆ
ಜೈಲರ್‌ನಲ್ಲಿ ಶಿವಣ್ಣ ಅವರಿಗೆ ಗೆಸ್ಟ್ ರೋಲ್ ನೀಡಿದ್ದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಈಗ ಜೈಲರ್2 ನಲ್ಲಿ ಶಿವಣ್ಣ ಅವರ ಪಾತ್ರಕ್ಕೆ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ನರಸಿಂಹನ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಹೀಗೊಂದು ಸುದ್ದಿ ಸದ್ಯ ಚೆನ್ನೈನಲ್ಲಿ ಕೇಳಿ ಬರುತ್ತಿದ್ದು ಜೈಲರ್ 2 ಚಿತ್ರಕ್ಕಾಗಿ ಶಿವಣ್ಣ ಸದ್ಯ 15 ದಿನಗಳ ಕಾಲ್ ಶೀಟ್ ನೀಡಿದ್ದಾರೆ.
ಇದನ್ನೂ ಓದಿ :ಪತ್ನಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಸ್ನೇಹಿತನಿಗೆ ಗುಂಡಿ ತೋಡಿದ ಗಂಡ
ಅಂದ ಹಾಗೆ ಶಿವಣ್ಣ ಚಿಕಿತ್ಸೆಗೆಂದು ಅಮೆರಿಕಾಗೆ ತೆರಳಿದ್ದ ಹಿನ್ನೆಲೆ, ಜೈಲರ್ 2 ಚಿತ್ರದಲ್ಲಿ ಶಿವಣ್ಣ ಅಭಿನಯಿಸುವುದು ಅನುಮಾನ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಈಗ ಶಿವಣ್ಣ ಅಮೆರಿಕಾದಲ್ಲಿ ಚಿಕಿತ್ಸೆಯನ್ನು ಪಡೆದು ಮರಳಿದ್ದಾರೆ. ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ತಮ್ಮ ಇಷ್ಟದ ಸ್ಥಳಕ್ಕೆ ಭೇಟಿಯನ್ನು ಕೂಡ ಕೊಡುತ್ತಿದ್ದಾರೆ. ಈ ಹಿನ್ನೆಲೆ ಶಿವಣ್ಣ ಜೈಲರ್ 2 ಚಿತ್ರದಲ್ಲಿ ಅಭಿನಯಿಸುವುದು ಬಹುತೇಕ ಖಚಿತವಾಗಿದೆ.
ಇನ್ನು ಶಿವಣ್ಣ ಈ ಹಿಂದೆ ಖುದ್ದು ಹೇಳಿದಂತೆ ಮಾರ್ಚ್‌ನಿಂದ ನಿರಂತರವಾಗಿ ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ರಜನಿಕಾಂತ್ ಕೂಡ ಸದ್ಯಕ್ಕೆ ಲೋಕೇಶ್ ಕನಕ್ರಾಜ್ ನಿರ್ದೇಶನದ ಕೂಲಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದ ನಂತರ ಜೈಲರ್ 2 ಶುರು ಮಾಡಲಿದ್ದಾರೆ ತಲೈವಾ. ಹೀಗಾಗಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಜೈಲರ್ 2 ಚಿತ್ರಕ್ಕಾಗಿ ಶಿವಣ್ಣ ಮತ್ತು ರಜನಿಕಾಂತ್ ಮತ್ತೆ ಮುಖಾಮುಖಿಯಾಗುವ ಸಾಧ್ಯತೆ ಇದೆ ಎನ್ನುವುದು ಸದ್ಯಕ್ಕೆ ಕೇಳಿ ಬರುತ್ತಿರುವ ಮತ್ತೊಂದು ಸುದ್ದಿ. ಇನ್ನುಳಿದಂತೆ ಜೈಲರ್ 2 ನಲ್ಲಿ ಕೂಡ ಮೋಹನ್ ಲಾಲ್ ಇರಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇವರ ಜೊತೆಗೆ ಬಾಲಿವುಡ್ ನಟ ಜಾಕಿ ಶ್ರಾಫ್ ಮತ್ತು ಆಂಧ್ರದ ಸ್ಟಾರ್ ಬಾಲಯ್ಯ ಕೂಡ ಜೈಲರ್ 2ನಲ್ಲಿ ಇರಲಿದ್ದಾರೆ
ಜೈಲರ್ 2 ಹೊರತು ಪಡಿಸಿ ರಾಮ್ ಚರಣ್ ತೇಜಾ ಅಭಿನಯದ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕೂಡ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕನ್ನಡದಲ್ಲಿ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಜೊತೆ ಅಭಿನಯಿಸಿರುವ 45 ಚಿತ್ರ ಅಗಸ್ಟ್‌ನಲ್ಲಿ ತೆರೆಗೆ ಬರಲಿದೆ. ಶ್ರೀನಿ ನಿರ್ದೇಶನದ ಎ ಫಾರ್ ಆನಂದ್ ಸೇರಿ ಹಲವು ಕನ್ನಡದ ಚಿತ್ರಗಳಲ್ಲಿ ಶಿವಣ್ಣ ಅಭಿನಯಿಸುತ್ತಿದ್ದಾರೆ. ಇದರ ನಡುವೆ ಮಗಳು ನಿವೇದಿತಾ ನಿರ್ಮಾಣದ ಫೈರ್ ಫ್ಲೈ ಚಿತ್ರದಲ್ಲಿ ಅತಿಥಿ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ ಶಿವಣ್ಣ. ಒಟ್ಟಾರೆಯಾಗಿ ಈಗ ರೆಸ್ಟ್‌ನಲ್ಲಿರೋ ಶಿವಣ್ಣ ಮಾರ್ಚ್‌ನಿಂದ ಮತ್ತೆ ಆ್ಯಕ್ಷನ್‌ಗೆ ಇಳಿಯೋದು ಕನ್ಫರ್ಮ್ ಆಗಿದೆ..