ಲಾಹೋರ್ : ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿಗೆ ಈ ಬಾರಿ ಪಾಕಿಸ್ತಾನ ಆಥಿತ್ಯ ವಹಿಸಿದ್ದು. ಫೆ.19ರಿಂದ ಪಂದ್ಯಾಟಗಳು ಆರಂಭವಾಗಿವೆ. ಇಂದು(ಫೆ.22) ಪಾಕಿಸ್ತಾನದ ಲಾಹೋರ್ನಲ್ಲಿ ಆಸ್ಟೇಲಿಯಾ ಮತ್ತು ಇಂಗ್ಲೇಡ್ ನಡುವೆ ಪಂದ್ಯ ನಡೆಯುತ್ತಿದ್ದ. ಪಂದ್ಯದ ಆರಂಭದ ವೇಳೆ ಆಸ್ಟ್ರೇಲಿಯಾದ ರಾಷ್ಟ್ರಗೀತೆಯ ಬದಲಿಗೆ ಭಾರತದ ರಾಷ್ಟ್ರಗೀತೆ ನುಡಿಸಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯ ಲಾಹೋರ್’ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಸಂಪ್ರದಾಯದಂತೆ ಆಟಕ್ಕೂ ಮೊದಲು ಎರಡು ದೇಶಗಳ ರಾಷ್ಟ್ರಗೀತಯನ್ನು ನುಡಿಸುವುದು ಸಾಮಾನ್ಯ, ಆದರೆ ಆಸ್ಟ್ರೇಲಿಯಾದ ರಾಷ್ಟ್ರಗೀತೆ ‘ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್’ ಬದಲಿಗೆ ಭಾರತೀಯ ರಾಷ್ಟ್ರಗೀತೆ ‘ಜನ ಗಣ ಮನ’ ತಪ್ಪಾಗಿ ನುಡಿಸಿದ ವಿಲಕ್ಷಣ ಘಟನೆ ನಡೆದಿದೆ.
Pakistan by mistakenly played Indian National Anthem during England Vs Australia #ChampionsTrophy2025 pic.twitter.com/31D7hA6i6n
— hrishikesh (@hrishidev22) February 22, 2025
ಇದನ್ನೂ ಓದಿ :ಕೌಟುಂಬಿಕ ಕಲಹ: ಹೆಂಡತಿಯ ಕೊಲೆ ಮಾಡಿ, ನೇಣಿಗೆ ಶರಣಾದ ಗಂಡ, ಮೂರು ಮಕ್ಕಳು ಅನಾಥ
ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು. ಎಕ್ಸ್ ಬಳಕೆದಾರರೊಬ್ಬರು ‘ಪಾಕಿಸ್ತಾನ ನಿಜವಾಗಿಯೂ ಭಾರತವನ್ನು ಮಿಸ್ ಮಾಡಿಕೊಳ್ಳುತ್ತಿದೆ’ ಎಂದು ಟ್ವಿಟ್ ಮಾಡಿ ಪಾಕಿಸ್ತಾನಕ್ಕೆ ತಿವಿದಿದ್ದಾರೆ. ಭಾರತ ತನ್ನೆಲ್ಲಾ ಪಂದ್ಯಗಳನ್ನು ಹೈಬ್ರೀಡ್ ಮಾದರಿಯಲ್ಲಿ ದುಬೈನಲ್ಲಿ ಆಡಲಿದ್ದು. ನಾಳೆ ಪಾಕಿಸ್ತಾನ ಮತ್ತು ಭಾರತದ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.