ಹುಬ್ಬಳ್ಳಿ : ಅಜ್ಜಿಯ ಪುಣ್ಯತಿಥಿಗೆ ಹೋಗಿ ವಾಪಸಾಗುವ ವೇಳೆ ಅಪಘಾತವಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು. ಮೃತ ಯುವಕರನ್ನು ಹುಬ್ಬಳ್ಳಿ ಗಾಂಧಿವಾಡ ನಿವಾಸಿಗಳಾದ ಸುಜಿತ್ (21), ವಿಕಾಸ್ (17) ಎಂದು ಗುರುತಿಸಲಾಗಿದೆ.
ಹುಬ್ಬಳ್ಳಿಯ ವಿದ್ಯಾನಗರದ ಬಳಿ ಭೀಕರ ಅಪಘಾತ ನಡೆದಿದ್ದು. ಅಜ್ಜಿಯ ಪುಣ್ಯತಿಥಿಗೆ ಎಂದು 6ಜನ ಸ್ನೇಹಿತರು ಧಾರವಾಡಕ್ಕೆ ಹೋಗಿದ್ದರು. ಪುಣ್ಯ ತಿಥಿಯನ್ನು ಮುಗಿಸಿ ಬೆಳಗಿನ ಜಾವ 4 ಗಂಟೆಗೆ ಗಾಡಿಯಲ್ಲಿ ವಾಪಾಸಾಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ ರೋಡ್ಸ್ ಹಂಪ್ಸ್ ನೋಡದೆ ವೇಗವಾಗಿ ಬೈಕ್ ಚಲಾಯಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಪಕ್ಕದಲ್ಲಿದ್ದ ಕಬ್ಬಿಣದ ಗೇಟ್ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಇದನ್ನೂ ಓದಿ : ಸಿದ್ದರಾಮಯ್ಯ ನಮ್ಮ ನಾಯಕ, ಎಲ್ಲಾ ಚುನಾವಣೆಗೂ ಅವರು ಬೇಕೂ: ಡಿಕೆ. ಶಿವಕುಮಾರ್
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿತಾದರೂ ಇಬ್ಬರು ಚಿಕಿತ್ಸೆ ಸಾವನ್ನಪ್ಪಿದ್ದಾರೆ. ಮೃತ ಯುವಕರು ಮತ್ತು ಆತನ ಸ್ನೇಹಿತರು ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.