ಮೈಸೂರು: ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದು. ಫೆಬ್ರವರಿ 10ನೇ ತಾರೀಖು ಉದಯಗಿರಿಯಲ್ಲಿ ಘಟನೆ ಏಕಾಯಿತು ಎಂಬ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೆ, ಪ್ರಾಥಮಿಕ ಹಂತದ ಮಾಹಿತಿಯನ್ನು ತಿಳಿದುಕೊಂಡಿದ್ದೇನೆ. ನಷ್ಟ ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ, ಆದರೆ ಉತ್ತರಪ್ರದೇಶದ ಮಾದರಿಯ ಕ್ರಮ ಅಗತ್ಯ ಇಲ್ಲ ಎಂದು ಹೇಳಿದರು.
ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡ ಪರಮೇಶ್ವರ್ ‘ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ, ಈಗಾಗಿ ತನಿಖೆ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ.ಯಾರೂ ಕೂಡ ಇಂತಹ ಘಟನೆಗಳಲ್ಲಿ ರಾಜಕೀಯ ಮಾಡಬಾರದು. ಅಂತಹವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ಕೂಡ ನೀಡಲ್ಲ.
ಸಮಯ ಸಂದರ್ಭದಲ್ಲಿ ಅವರಿಗೆ ಕಿವಿಮಾತು ಹೇಳುತ್ತೇನೆ. ಸಾರ್ವಜನಿಕರು ಇಂತಹ ವೇಳೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು ಎಂದು ಜನರಲ್ಲಿ ಪರಮೇಶ್ವರ್ ಮನವಿ ಮಾಡಿಕೊಂಡರು.
ಮುಂದುವರಿದು ಮಾತನಾಡಿದ ಪರಮೇಶ್ವರ ‘ಪೊಲೀಸ್ ಹಾಗೂ ವಾಹನಗಳ ಮೇಲೆ ಕಲ್ಲು ಹೊಡೆದವರ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ. ಈಗಾಗಲೇ ಸಿಸಿಟಿವಿ ದೃಶ್ಯ ಆಧರಿಸಿ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳಿವವರು ಎಷ್ಟೇ ಬಲಾಡ್ಯರಾಗಿದ್ರು ಕ್ರಮ ತಗೆದುಕೊಳ್ಳುತ್ತೇವೆ. ಅಂತಹವರ ಮೇಲೆ ನಿರ್ಧಾಕ್ಷಣ್ಯ ಕ್ರಮ ತೆಗೆದುಕೊಳ್ಳುತ್ತೇವೆ.
ಇದನ್ನೂ ಓದಿ :ಕೆಲಸಕ್ಕೆ ಸೇರಿ ಮೂರನೇ ವರ್ಷದ ಸಂಭ್ರಮದಲ್ಲಿದ್ದ ಯೋಧ ಗುಂಡೇಟು ತಗುಲಿ ಸಾವು
ಪೊಲೀಸ್ ಇಲಾಖೆಗೆ ಯಾವುದೇ ಪಕ್ಷ ಮುಖ್ಯ ಅಲ್ಲ. ಸಮಾಜದಲ್ಲಿ ಶಾಂತಿ ಕಾಪಾಡಲಿಕ್ಕೆ ಪೊಲೀಸ್ನವರು ಇರೋದು. ಕಾನೂನು ರಕ್ಷಣೆಗೆ ಪೋಲೀಸರ ಮೊದಲ ಆದ್ಯತೆ. ಘಟನೆ ಆದ ಬಳಿಕ ಕೆಲವರು ಹೇಳಿಕೆ ನೀಡ್ತಾರೆ.
ಅದನ್ನ ಹೇಳಬಾರದು ಎಂದು ಹೇಳಲು ಸಾಧ್ಯವಿಲ್ಲ. ಅಂತಹ ಹೇಳಿಕೆಗಳಿಂದ ಪೊಲೀಸ್ನವರನ್ನ ಕುಗ್ಗಿಸಲು ಸಾಧ್ಯವಿಲ್ಲ. ಪೊಲೀಸರಿಗೆ ಅಂತಹ ಎಲ್ಲ ಟ್ರೈನಿಂಗ್ ಇರುತ್ತೆ. ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ನಷ್ಟ ಬರಿಸಲು ಉತ್ತರಪ್ರದೇಶ ಮಾದರಿ ಅಗತ್ಯ ಇಲ್ಲ !
ನಷ್ಟ ಮಾಡಿದವರಿಂದ ನಷ್ಟ ಬರಿಸುವ ವಿಚಾರವಾಗಿ ಮಾತನಾಡಿದ ಪರಮೇಶ್ವರ್ ‘ ಉತ್ತರ ಪ್ರದೇಶ ಮಾದರಿಯ ಕ್ರಮ ಕರ್ನಾಟಕಕ್ಕೆ ಸದ್ಯ ಅಗತ್ಯ ಇಲ್ಲ. ಆ ಮಾದರಿ ಬಗ್ಗೆ ಅನೇಕ ಚರ್ಚೆ ಆಗುತ್ತಿದೆ. ಉತ್ತರ ಪ್ರದೇಶದಲ್ಲಿ ಬುಲ್ಡಜರ್ ತೆಗೆದುಕೊಂಡು ಹೋಗುವ ಕೆಲಸ ಆಗುತ್ತದೆ. ಈಗ ಅಂತಹ ಪರಿಸ್ಥಿತಿ ಇಲ್ಲ. ಮುಂದೆ ಬೇಕಿದ್ರೆ ನೋಡೋಣ. ಜನರು ಪೊಲೀಸರಿಗೆ ಸಹಕಾರ ನೀಡಬೇಕು. ಇದನ್ನ ಹೊರತುಪಡಿಸಿ ನಾವೇ ಕಾನೂನು ಕೈಗೆ ತೆಗೆದುಕೊಳ್ಳೋದು ಬೇಡ ಎಂದು ಹೇಳಿದರು.