ಮುಂಬೈ: ಇನ್ನೇನು ಕೆಲವೆ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದ್ದು. ಈಗಿನಿಂದಲೇ ಜನರು ಇದರ ನಿರೀಕ್ಷೆಯಲ್ಲಿದ್ದಾರೆ. ಇದರ ಬೆನ್ನಲ್ಲೆ ಕ್ರಿಕೆಟ್ ಪ್ರೇಮಿಗಳಿಗೆ ಬಿಗ್ಶಾಕ್ ಎದುರಾಗಿದ್ದು. ಐಪಿಎಲ್ ಪಂದ್ಯಗಳನ್ನು ಜಿಯೋ ಸಿನಿಮಾದಲ್ಲಿ ವೀಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.
ಹೌದು.. ಕಳೆದ ಎರಡು ವರ್ಷಗಳಿಂದ ಜಿಯೋ ಸಿನಿಮಾದಲ್ಲಿ ಎಲ್ಲಾ ಐಪಿಎಲ್ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಣೆ ಮಾಡಬಹುದಾಗಿತ್ತು. ಆದರೆ ಇದೀಗ ಜಿಯೋ ಹಾಟ್‌ಸ್ಟಾರ್ ಎರಡು ಆ್ಯಪ್ಗಳು ವಿಲೀನವಾಗಿದ್ದು. ಆಪ್ನಲ್ಲಿ ಹಣ ಪಾವತಿಸಿ ಎಲ್ಲಾ ಲೈವ್ ಸ್ಟ್ರೀಮ್ಗಳನ್ನು ನೋಡಬಹುದಾಗಿದೆ. ಜಿಯೋ ಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವಿಲೀನಗೊಂಡು ಜಿಯೋಸ್ಟಾರ್ ಆಗಿ ಬದಲಾಗಿದ್ದು ಶುಕ್ರವಾರ ಹೊಸ ಸ್ಟ್ರೀಮಿಂಗ್ ಅಪ್ಲಿಕೇಶನನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ :50 ಕೋಟಿ ಭಕ್ತರು, 3 ಲಕ್ಷ ಕೋಟಿ ಆದಾಯ: ಕುಂಭಮೇಳದಿಂದ ಹರಿದು ಬಂತು ಆದಾಯದ ಮಹಾಪೂರ
ಕೆಲವು ವರದಿ ಪ್ರಕಾರ ಲೈವ್ ಸ್ಟ್ರೀಮ್ ಆರಂಭವಾದ ಕೆಲ ನಿಮಿಷಗಳ ಕಾಲ ಉಚಿತವಾಗಿ ವೀಕ್ಷಿಸಬಹುದಾಗಿದ್ದು. ನಂತರ ವಿಕ್ಷೀಸಲು ಚಂದದಾರಿಕೆ ಪಡೆದು ವಿಕ್ಷೀಸಬೇಕಾಗುತ್ತದೆ. ಆರಂಭಿಕ ಚಂದದಾರಿಕೆ ಬೆಲೆ 149 ರೂನಿಂದ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಜಿಯೋ ಸಿನಿಮಾ ಅಥವಾ ಹಾಟ್‌ಸ್ಟಾರ್ ಎರಡರಲ್ಲಿ ಯಾವುದೇ ಒಂದು ಒಟಿಟಿ ಫ್ಲಾಟ್ಪಾರ್ಮ ಚಂದಾದಾರಿಕೆ ಹೊಂದಿರುವವರು ಅದರ ಅವಧಿ ಮುಗಿಯುವವರೆಗೂ ವಿಕ್ಷೀಸಲು ಅವಕಾಶ ಕಲ್ಪಿಸಲಾಗಿದೆ.