ಪ್ರಯಾಗ್ರಾಜ್ : ಮಾಜಿ ಸಚಿವ ಶ್ರೀರಾಮುಲು ಪ್ರಯಾಗ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಿದ್ದು. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.
ಕಳೆದ ಕೆಲದಿನಗಳಿಂದ ರಾಜ್ಯ ರಾಜಕಾರಣದ ಪ್ರಮುಖ ಮುಖವಾಗಿರುವ ಶ್ರೀರಾಮುಲು ಪ್ರಯಾಗ್ರಾಜ್ಗೆ ಭೇಟಿ ನೀಡಿದ್ದಾರೆ. ಪತ್ನಿ ಭಾಗ್ಯಲಕ್ಷ್ಮಿ ಜೊತೆ ಕುಂಭಮೇಳದಲ್ಲಿ ಭಾಗಿಯಾಗಿರುವ ಇವರು ಕುಂಭದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಲು ದೆಹಲಿಗೆ ಹೋಗುತಿದ್ದ ಇವರು. ಅಲ್ಲಿ ದೆಹಲಿಗೆ ಯಾವುದೇ ಕರೆ ಬರದ ಹಿನ್ನಲೆ ಪ್ರಯಾಗ್ನಿಂದ ವಾಪಾಸಾಗಿದ್ದಾರೆ.
ಇದನ್ನೂ ಓದಿ :ಬೆಂಗಳೂರು: ಎರಡು ಕೈಗಳ ಮಧ್ಯ ಮುಗಿಯುವ ರೂಂಗೆ 25 ಸಾವಿರ ಬಾಡಿಗೆ ನೀಡುತ್ತಿದ್ದ ಯುವಕನ ವಿಡಿಯೋ ವೈರಲ್
ಕಳೆದ ತಿಂಗಳು ಬಿಜೆಪಿ ಪಕ್ಷದ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರಾದ ರಾಧಮೋಹನ್ ಅಗರ್ವಾಲ್ ಅವರು ಸಂಡೂರು ಸೋಲಲು ಶ್ರೀರಾಮುಲು ಕಾರಣ ಎಂದು ಹೇಳಿದ್ದರು. ಇದರಿಂದ ಕುಪಿತರಾಗಿದ್ದ ಶ್ರೀರಾಮುಲು ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದರು. ಜನಾರ್ಧನ್ ರೆಡ್ಡಿಯವರು ಈ ರೀತಿ ಹೇಳಿ ನನ್ನ ಮೇಲೆ ಆರೋಪ ಹೊರಿಸಿದ್ದಾರೆ ಎಂದು ಪತ್ರಿಕಾ ಗೋಷ್ಟಿಯಲ್ಲಿ ಹೇಳಿಕೆ ನೀಡಿದ್ದರು.