Saturday, February 8, 2025

ನಿರ್ಮಾಪಕರಿಗೆ ಹಣ ವಾಪಾಸ್​ ನೀಡಿದ್ದೇನೆ: ಆದರೆ ಪ್ರೇಮ್​ ಜೊತೆ ಸಿನಿಮಾ ಮಾಡುತ್ತೇನೆ: ದರ್ಶನ್​

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ನಂತರ ನಟ ದರ್ಶನ್​ ಸಿನಿಮಾ ಚಟುವಟಿಕೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದರ ನಡುವೆ ದರ್ಶನ್​ ನಿರ್ಮಾಪಕರಿಗೆ ಅಡ್ವಾನ್ಸ್​​ ಹಣ ವಾಪಾಸು ನೀಡುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿತ್ತು. ಇದಕ್ಕೆ ಕ್ಲಾರಿಟಿ ಕೊಟ್ಟಿರುವ ದರ್ಶನ್​ ನಿರ್ಮಾಪಕರೊಬ್ಬರಿಗೆ ಹಣ ವಾಪಾಸು ನೀಡಿದ್ದಾಗಿ ಹೇಳಿದ್ದಾರೆ.

ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಹಣ ವಾಪಾಸು ಕೊಟ್ಟಿರುವುದಾಗಿ ಹೇಳಿದ ದರ್ಶನ್​. ಅವರ ನನ್ನ ಬಳಿ ಬಂದಾಗ ಅವರಿಗೆ ಅನೇಕ ಕಮಿಟ್​ಮೆಂಟ್​ಗಳಿದ್ದವು. ಆ ಸಮಯದಲ್ಲಿ ನಾನು ಅವರಿಗೆ ಸಿನಿಮಾ ಮಾಡುವುದಾಗಿ ಹೇಳಿ ಹಣ ಪಡೆದಿದ್ದೆ. ಆದರೆ ಇವಾಗ ತುಂಬಾ ಸಮಯ ಕಳೆದಿದೆ. ಅವರಿಗೂ ಅನೇಕ ಸಮಸ್ಯೆ ಇದೆ. ಇದೇ ಕಾರಣಕ್ಕೆ ಹಣವನ್ನು ವಾಪಾಸು ನೀಡಿದ್ದು. ಮತ್ತೊಂದು ಹೊಸ ಕಥೆ ಬಂದಾಗ ಸಿನಿಮಾ ಮಾಡುವುದಾಗಿ ಹೇಳಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ :ಹಣ ಮತ್ತು ಮದ್ಯದ ಮೇಲೆ ಗಮನ ಹರಿಸಿ ಕೇಜ್ರಿವಾಲ್​ ಸೋತಿದ್ದಾನೆ: ಅಣ್ಣಾ ಹಜಾರೆ

ಆದರೆ ನಾನು ಪ್ರೇಮ್​ ಜೊತೆ ಸಿನಿಮಾ ಮಾಡೇ ಮಾಡುತ್ತೇನೆ, ಅವರು ನನ್ನ ಗುರುಗಳು ನನ್ನ ಪ್ರೀತಿಯ ಸ್ನೇಹಿತೆ ರಕ್ಷಿತಾ ಆಸೆ ಕೂಡ ಇದೆ. ಕೆವಿಎನ್​ ಪ್ರೋಡೆಕ್ಷನ್​ನಲ್ಲಿ ಸಿನಿಮಾ ನಡೆಯುತ್ತಿದೆ. ಅದರ ಬದಲು ಬೇರೆ ಪ್ರೋಡಕ್ಷನ್​ನಲ್ಲಿ ಸಿನಿಮಾ ಮಾಡುತ್ತೇನೆ. ಆದರೆ ನಿಮ್ಮ ಅಭಿಮಾನಕ್ಕೆ ನಾನು ಸದಾ ಚಿರರುಣಿಯಾಗಿದ್ದೇನೆ. ನನ್ನ ಹೀರೋ ಧನ್ವೀರ್​, ಬುಲ್​ಬುಲ್​ ರಚಿತಾರಾಮ್​, ರಕ್ಷಿತಾಗೆ ಥ್ಯಾಂಕ್ಸ್​ ಹೇಳಿದರು.

 

RELATED ARTICLES

Related Articles

TRENDING ARTICLES