ಮಂಡ್ಯ : ರಾಜ್ಯ ಕಾಂಗ್ರೆಸ್ ಸರ್ಕಾರ ಕಡುಭ್ರಷ್ಟ ಸರ್ಕಾರ ಎಂದಿದ್ದ ಕುಮಾರ್ಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಸಚಿವ ಚೆಲುವರಾಯಸ್ವಾಮಿ ‘ರಾಜ್ಯದಲ್ಲಿದೇವೇಗೌಡರ ಕುಟುಂಬ ಬಿಟ್ರೆ ಬೇರೆ ಯಾರು ಪ್ರಾಮಾಣಿಕರಲ್ಲ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಚೆಲುವರಾಯಸ್ವಾಮಿ ‘ರಾಜ್ಯದಲ್ಲಿ ಕೇವಲ ದೇವೇಗೌಡ ಕುಟುಂಬ ಮಾತ್ರ ಪ್ರಾಮಾಣಿಕರು. ಕಾಂಗ್ರೆಸ್‌ನವರು ಮಾತ್ರ ಭ್ರಷ್ಟರು, ಬಿಜೆಪಿಯನ್ನ ಒಪ್ಪುತ್ತಾರೆ ಅನ್ಸುತ್ತೆ. ದೇವೇಗೌಡರಿಗೆ ಇನ್ನು ಹತ್ತಾರು ವರ್ಷ ಆಯಸ್ಸು ಸಿಗಲಿ. ಅವರು ನಮ್ಮನ್ನು ಹೀಗೆ ಟೀಕೆ ಮಾಡುತ್ತಿರಲಿ. ಅವರ ಕುಟುಂಬದ ಬಗ್ಗ ಮಾತನಾಡಲು ತುಂಬಾ ಇದೆ. ಆದರೆ ಇಳಿ ವಯಸ್ಸಿನಲ್ಲಿ ದೇವೇಗೌಡರ ಬಗ್ಗೆ ಮಾತನಾಡಲು ಇಷ್ಟವಿಲ್ಲ ಎಂದು ಹೇಳಿದರು.
ಇದನ್ನೂ ಓದಿ :ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಂತೋಷ್ ಲಾಡ್
ಮುಂದುವರಿದು ಮಾತನಾಡಿದ ಚೆಲುವರಾಯಸ್ವಾಮಿ ‘ನಾನು ದೇವೇಗೌಡರ ಜೊತೆಯಲ್ಲೇ ಇದ್ದು ರಾಜಕಾರಣ ಮಾಡಿದವನು. ‘ನನ್ನ ಜೊತೆ ಇದ್ದಾಗ ಅವರ ಮಕ್ಕಳಿಗೆ ದೇವೇಗೌಡರು ಏನು ಬುದ್ದಿ ಹೇಳಿದ್ರು ಗೊತ್ತಿದೆ.
‘ನಾನು ಹವಾಯ್ ಚಪ್ಲಿ, ಪಂಚೆ ಹಾಕ್ತಿದ್ದೆ. ನೀವು ಹಾಗೇ ಇದ್ದೀರಾ’ ಎಂದು ಕೇಳ್ತಿದ್ರು?, ದೇವೇಗೌಡರು ಬಗ್ಗೆ ನನಗೆ ಅಪಾರ ಗೌರವ ಇದೆ ಎಂದು ಹೇಳಿದರು.
ಕುಮಾರಸ್ವಾಮಿಯನ್ನು ರಾಜ್ಯದ ಅಭಿವೃದ್ದಿಗೆ ಬಳಸಿಕೊಳ್ಳುತ್ತಿಲ್ಲ ಎಂಬ ವಿಚಾರ ಕುರಿತು ಮಾತನಾಡಿದ ಸಚಿವ ‘
ಆಂಧ್ರ, ಬಿಹಾರಿಗೆ ಅನುದಾನ ಮೋದಿ ಕೊಟ್ಟಿರೋದು, ಕುಮಾರಸ್ವಾಮಿ ಅಲ್ಲ. ರಾಜ್ಯಕ್ಕೆ ಏನಾದರೂ ಅಭಿವೃದ್ಧಿ ಕೆಲಸ ಮಾಡಲು ಹೇಳಿ. ನಾನು ಅರ್ಜಿ ಹಿಡಿದು ಅವರ ಮನೆ ಬಳಿ ನಿಲ್ಲಲು ಆಗುತ್ತಾ? ರಾಷ್ಟ್ರೀಯ ಹೆದ್ದಾರಿ, ಫ್ಯಾಕ್ಟರಿ ಮಾಡಲು ಮಾಧ್ಯಮಗಳ ಮೂಲಕ ಹೇಳಿದ್ದೆ.ಈ ಜಿಲ್ಲೆ, ರಾಜ್ಯದ ಜನ ನಿಮ್ಮನ್ನು ಗೆಲ್ಲಿಸಿಲ್ವಾ?
ಅಭಿವೃದ್ಧಿ ಮಾಡಿ ಅಂತ ಅರ್ಜಿ ಹಿಡಿದು ನಿಂತ್ಕೋಬೇಕಾ? ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಸಹಕಾರದಿಂದ ಮೋದಿ ಸರ್ಕಾರ ಇದೆ. ಅವರು ಇಲ್ಲ ಅಂದರೆ ಮೋದಿ ಪ್ರಧಾನಿಯಾಗಿರಲ್ಲ. ಹಾಗಾಗಿ ಅವರ ರಾಜ್ಯಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ಹೇಳಿದರು.