ಉತ್ತರಪ್ರದೇಶ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಡಿಸಿಎಂ ಡಿಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಪಾಲ್ಗೊಂಡಿದ್ದಾರೆ. ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿರುವ ಐಶ್ವರ್ಯ ಇದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದೇ ಫೆಬ್ರವರಿ 09 ಮತ್ತು 10ರಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಕೂಡ ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದು. ಇದಕ್ಕೂ ಮುನ್ನವೇ ಐಶ್ವರ್ಯ ಅವರು ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಈ ಕುರಿತಾದ ವಿಡಿಯೋಗಳನ್ನು ತನ್ನ ಇನ್ಸ್ಟ್ಗ್ರಾಂನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ :ಪರಸ್ತ್ರೀ ಹಿಂದೆ ಬಿದ್ದ ಗಂಡ: ಸುಪಾರಿ ಕೊಟ್ಟು ಕಾಲು ಮುರಿಸಿದ ಹೆಂಡತಿ
ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವ 2025ರ ಮಹಾ ಕುಂಭಮೇಳಕ್ಕೆ ಜ.13 ರಂದು ಅದ್ದೂರಿ ಚಾಲನೆ ಸಿಕ್ಕಿದೆ. 144 ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಫೆ.26 ರ ವರೆಗೆ ಉತ್ಸವ ಜರುಗಲಿದೆ.