Tuesday, February 4, 2025

ಕನ್ನಡಿಗನ ಮೇಲೆ ಕೈ ಮಾಡಿದ ಹಿಂದಿ ಭಾಷಿಕರ ಸೊಕ್ಕು ಮುರಿದ ಕನ್ನಡ ಪರ ಹೋರಾಟಗಾರರು

ಬೆಂಗಳೂರು : ನಗರದ ಚಿಕ್ಕಬಾಣಾವರದಲ್ಲಿರುವ ಗಬ್ರು ಹೋಟೆಲ್​ನಲ್ಲಿ ಡೆಲಿವರಿ ಬಾಯ್​ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ, ಹೋಟೆಲ್​ ಸಿಬ್ಬಂದಿಗಳು ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ಕನ್ನಡ ಪರ ಹೋರಾಟಗಾರರು ಹಿಂದಿವಾಲಗಳ ಸೊಕ್ಕು ಮುರಿದಿದ್ದು. ಹೋಟೆಲ್​ ಬಾಗಿಲು ಮುಚ್ಚಿಸಿ ಕ್ಷಮೆ ಕೇಳುವಂತೆ ಎಚ್ಚರಿಕೆ ನೀಡಿದ್ದಾರೆ.

ಹೌದು.. ನಗರದಲ್ಲಿ ಹಿಂದಿ ಭಾಷಿಕರ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿಯಾಗಿ ಗಬ್ರು ಹೋಟೆಲ್​ಗೆ ಆರ್ಡರ್​ ಪಡೆಯಲು ಹೋಗಿದ್ದ ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದಕ್ಕೆ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಯುವಕನನ್ನು ಒಳಗೆ ಎಳೆದೊಯ್ದು ಹಲ್ಲೆ ನಡೆಸಿದ್ದರು. ಈ ಘಟನೆ ಭಾರಿ ಸಂಚಲನಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ :ಅಕ್ರಮ ಸಂಬಂಧ ಬೆಳೆಸುವಂತೆ ಒತ್ತಾಯ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹ*ತ್ಯೆ

ಇದೀಗ ಹಲ್ಲೆಗೊಳಗಾದ ಯುವಕನ ಜೊತೆ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿ ಹೋಟೆಲ್​ ಬಾಗಿಲನ್ನು ಮುಚ್ಚಿಸಿದ್ದು. ಹಲ್ಲೆ ಮಾಡಿದ ಪುಂಡರನ್ನು ಕೆಲಸದಿಂದ ವಜಾಗೊಳಿಸುವಂತೆ ಪ್ರತಿಭಟಸಿದ್ದಾರೆ. ಜೊತೆಗೆ ಹಲ್ಲೆಗೊಳಗಾಗಿರುವ ಯುವಕನ ಬಳಿ ಕ್ಷಮೆ ಕೇಳುವವರೆಗೂ ಹೋಟೆಲ್​ ತೆರೆಯದಂತೆ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES