ಬಾಗಲಕೋಟೆ : ಟಾಟಾ ಏಸ್ ವಾಹನ, ಕಾರು,ಎರಡು ಬೈಕ್ ಗಳ ನಡುವೆ ಸಂಭವಿಸಿದ ಸರಣಿ ಅಫಘಾತದಲ್ಲಿ ಮೂವರು ಸಾವನ್ನಪ್ಪಿದ್ದು. ಬಾಗಲಕೋಟೆಯ ಜಮಖಂಡಿಯ ಆಲಗೂರು ಗ್ರಾಮದಲ್ಲಿ ಅಪಘಾತ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆಯ ಆಲಗೂರು ಗ್ರಾಮದ ಬಳಿ ತಡರಾತ್ರಿ ಘಟನೆ ನಡೆದಿದ್ದು. ಜಮಖಂಡಿಯಿಂದ ವಿಜಯಪುರ ಕ್ಕೆ ಹೊರಟಿದ್ದ ಟಾಟಾಏಸ್ ವಾಹನ, ವಿಜಯಪುರದಿಂದ ಜಮಖಂಡಿಗೆ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಹಿಂದೆ ಬರುತ್ತಿದ್ದ ಎರಡೂ ಬೈಕ್ಗಳು ಟಾಟಾಏಸ್ಗೆ ಡಿಕ್ಕಿ ಹೊಡೆದಿವೆ.
ಇದನ್ನೂ ಓದಿ :30ಕ್ಕೂ ಅಧಿಕ ಮಹಿಳೆಯರ ಜೊತೆ ಪಲ್ಲಂಗದಾಟ: ಮತ್ತೊಬ್ಬ ಜೂನಿಯರ್ ಪ್ರಜ್ವಲ್ ರೇವಣ್ಣ ಪತ್ತೆ !
ಅಪಘಾತದಲ್ಲಿ ಸ್ಥಳದಲ್ಲೆ ಮೂವರು ಸಾವನ್ನಪ್ಪಿದ್ದು. ಟಾಟಾ ಏಸ್ ,ಕಾರು ಹಾಗೂ ಬೈಕ್ನಲ್ಲಿದ್ದ ತಲಾ ಒಬ್ಬರ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.