Monday, March 31, 2025

ಖಾಸಗಿ ಕಂಪನಿ ನಡೆಸುವ ಮೆಡಿಸಿನ್ ಪ್ರಯೋಗಕ್ಕೆ ಒಳಗಾಗಿ ವ್ಯಕ್ತಿ ಸಾ*ವು

ಬೆಂಗಳೂರು : ಸ್ವಯಂ ಪ್ರೇರಿತವಾಗಿ ಮೆಡಿಕಲ್​ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು. ಮೃತ ವ್ಯಕ್ತಿಯನ್ನು 33 ವರ್ಷದ  ನಾಗೇಶ್​ ಎಂದು ಗುರುತಿಸಲಾಗಿದೆ.

ಕಲ್ಬುರ್ಗಿ ಮೂಲದವನಾದ ನಾಗೇಶ್​ ತನ್ನೂರಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಆದರೆ ನಾಗೇಶ್​ಗೆ ಕೆಲ ದಿನಗಳ ಹಿಂದೆ ಆ್ಯಪ್ ಮೂಲಕ ಪರಿಚಯವಾದ ಮೆಡಿಸಿನ್ಸ್ ಎಕ್ಸಿಪಿರಿಮೆಂಟ್ ಗೆ ಒಳಗಾಗಿ ತನ್ನ ಜೀವವನ್ನೇ ಬಲಿಕೊಟ್ಟಿದ್ದಾನೆ.

ಹೌದು.. ಎಲೆಕ್ಟ್ರಾನಿಕ್ ಸಿಟಿಯಲ್ಲಿರೋ ಖಾಸಗಿ ಕಂಪನಿಯಲ್ಲಿ ಮನುಷ್ಯರ ಮೇಲೆ ಅನೇಕ ರೀತಿ ಖಾಯಿಲೆಗಳಿಗೆ ಮೆಡಿಸನ್ಸ್ ಪ್ರಯೋಗ ಮಾಡ್ತಾರೆ. ಇಂತ ಪ್ರಯೋಗಕ್ಕೆ ನಾಗೇಶ್ ಸ್ವಪ್ರೇರಿತವಾಗಿ ಒಳಗಾಗಿದ್ದ. ಆ್ಯಪ್ ಮೂಲಕ ಪ್ರಯೋಗಕ್ಕೆ ಬಂದಿದ್ದ ನಾಗೇಶ್ ಗೆ ಮೆಡಿಸನ್ಸ್ ನೀಡಿದ್ದ ಕಂಪನಿ ನಿಗದಿತ ಹಣವನ್ನೂ ನೀಡಿತ್ತು. ಇನ್ನು ನೋಂದಣಿ ವೇಳೆ ಸಾವನ್ನ ಹೊರತುಪಡಿಸಿ ಸೈಡ್ ಎಫೆಕ್ಟ್ ಬಗ್ಗೆ ತಿಳಿದೇ ಅಗ್ರಿಮೆಂಟ್ ಮಾಡಿಕೊಂಡಿದ್ದ.
ಆದ್ರೆ ಪ್ರಯೋಗ ನಡೆದ ಒಂದೇ ತಿಂಗಳಲ್ಲಿ ಅನಾರೋಗ್ಯದಿಂದ ನಾಗೇಶ್ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಆಸ್ತಿ ವಿವಾದ : ವೃದ್ದ ತಂದೆ-ತಾಯಿಗೆ ಬೆಂಕಿ ಇಟ್ಟು ಹ*ತ್ಯೆ ಮಾಡಿದ ಪಾಪಿ ಪುತ್ರ !

ಮೃತ ನಾಗೇಶ್ ಸಹೋದರ ಹೇಳುವಂತೆ ಡಿಸೆಂಬರ್ 2ನೇ ವಾರದಲ್ಲಿ ಮೆಡಿಸಿನ್ಸ್ ಪ್ರಯೋಗಕ್ಕೆ ಒಳಗಾಗಿದ್ದ ನಾಗೇಶ್ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಾಗೇಶ್, ಜನವರಿ 21ರಂದು ಸಹೋದರನ ಮನೆಯಲ್ಲಿದ್ದಾಗ ಮೃತಪಟ್ಟಿದ್ದಾನೆ‌.‌ ವೈದ್ಯರು ರಕ್ತ ಹೆಪ್ಪುಗಟ್ಟಿದ್ದರಿಂದ ನಾಗೇಶ್ ಸಾವನ್ನಪ್ಪಿದಾರೆ ಎನ್ನುತ್ತಿದ್ದಾರಂತೆ. ಆದರೆ ಮೆಡಿಸಿನ್ಸ್ ಪ್ರಯೋಗದಿಂದಲೇ ಸಹೋದರ ಸಾವನ್ನಪ್ಪಿದ್ದಾನೆ ಎಂದು ಈ ಜಾಲಹಳ್ಳಿ ಠಾಣೆಗೆ ದೂರು‌ ನೀಡಲಾಗಿದೆ‌. ಹೀಗಾಗಿ ನಾಗೇಶ್ ಸಾವಿನ ಬಗ್ಗೆ ಯುಡಿಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಕಂಪನಿಯವರನ್ನ ಕರೆಸಿ ಪೊಲೀಸರು ಹೇಳಿಕೆ ದಾಖಲಿದ್ದಾರೆ. ಇನ್ನು ನಾಗೇಶ್ ಮರಣೋತ್ತರ ಪರೀಕ್ಷೆ ವರದಿಗೆ ಪೊಲೀಸರು ಕಾಯುತ್ತಿದ್ದು, ವರದಿಯಲ್ಲಿ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಆದ್ರ ಮನೆಮಗನನ್ನ ಕಳೆದುಕೊಂಡ ನಾಗೇಶ್ ಕುಟುಂಬ ಕಂಗಾಲಾಗಿದೆ.

RELATED ARTICLES

Related Articles

TRENDING ARTICLES