Saturday, February 1, 2025

ಕೇಂದ್ರ ಬಜೆಟ್​ ಮಂಡನೆಗೆ ಕ್ಷಣಗಣನೆ ಆರಂಭ: ವಿತ್ತ ಸಚಿವರಿಗೆ ಸಿಹಿ ತಿನ್ನಿಸಿದ ರಾಷ್ಟ್ರಪತಿ !

ನವದೆಹಲಿ: ಕೇಂದ್ರ ಬಜೆಟ್​ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು. 11 ಗಂಟೆಗೆ ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ 2025-26ನೇ ಸಾಲಿನ ಪೂರ್ಣ ಬಜೆಟ್​ ಮಂಡನೆ ಮಾಡಲಿದ್ದಾರೆ. ನಿರ್ಮಾಲ ಸೀತಾರಮನ್​ ದಾಖಲೆಯ ಸತತ 8ನೇ ಬಜೆಟ್​ ಮಂಡಿಸುತ್ತಿದ್ದು. ಸಂಸತ್​ ಇತಿಹಾಸದಲ್ಲಿ ಹೆಚ್ಚು ಬಜೆಟ್‌ ಮಂಡಿಸಿದ ಮಹಿಳಾ ಹಣಕಾಸು ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

ಇದನ್ನೂ ಓದಿ :ನೀಲಿ ಚಿತ್ರದ ಶೂಟಿಂಗ್​ ವೇಳೆ ಬಾಲ್ಕನಿಯಿಂದ ಬಿದ್ದು ಖ್ಯಾತ ನೀಲಿ ತಾರೆ ಸಾ*ವು !

ಬಜೆಟ್​ ಮಂಡನೆಗೂ ಮುನ್ನ ಹಣಕಾಸು ಸಚಿವಾಲಯದ ನಾರ್ತ ಬ್ಯಾಂಕ್​ಗೆ ಭೇಟಿ ನೀಡಿದ ವಿತ್ತ ಸಚಿವೆ ಅಲ್ಲಿಂದ ಡಿಜಿಟಲ್​ ಸ್ವೂರಪದಲ್ಲಿರುವ ಬಜೆಟ್​ ಪ್ರತಿಯನ್ನು ತೆಗೆದುಕೊಂಡು ನೇರವಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿದರು. ಈ ವೇಳೆ ರಾಷ್ಟ್ರಪತಿಯರನ್ನು ಔಪಚಾರಿಕವಾಗಿ ಭೇಟಿಯಾಗಿ ಬಜೆಟ್​ ಮಂಡನೆಗೆ ಅನುಮತಿ ಪಡೆದ ನಿರ್ಮಾಲರಿಗೆ ರಾಷ್ಟ್ರಪತಿ ಮುರ್ಮು ಮೊಸರು ಮತ್ತು ಸಕ್ಕರೆಯನ್ನು ತಿನ್ನಿಸಿ ಶುಭ ಹಾರೈಸಿದರು.

ಬಜೆಟ್​ನ ನಿರೀಕ್ಷೆಗಳೇನು ? 

ಬಜೆಟ್​ನಲ್ಲಿ ರೈಲ್ವೆ ಇಲಾಖೆಯ ನಿರೀಕ್ಷೆಯೇನು !

  • ಸರಕು ಸೇವೆಗಳಿಗೆ ರೈಲ್ವೇ ಸಚಿವಾಲಯ ಆದ್ಯತೆ
  • ತಂತ್ರಜ್ಞಾನದಿಂದ ಉದ್ಯೋಗಿಗಳ ವೆಚ್ಚ ನಿಯಂತ್ರಣ
  • ಕಡಿಮೆ ದಟ್ಟಣೆ ನಿಲ್ದಾಣಗಳಲ್ಲಿ ನಿಲುಗಡೆ ಕಡಿಮೆ ಮಾಡುವುದು
  • ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ವಿಸ್ತರಿಸುವುದು
  • ಕವಚ ತಂತ್ರಜ್ಞಾನ ಅಳವಡಿಕೆಗೆ ಇನ್ನಷ್ಟು ಒತ್ತು
  • ಮುಂದಿನ ಐದು ವರ್ಷದಲ್ಲಿ ಮೆಟ್ರೋ ಮಾರ್ಗ ದ್ವಿಗುಣ
  • ಮೆಟ್ರೋ ಮಾರ್ಗಗಳೂ ಇನ್ನಷ್ಟು ವಿಸ್ತರಣೆ

ಜೊತೆಗೆ ಈ ಬಾರಿಯ ಬಜೆಟ್​ನಲ್ಲಿ ರಕ್ಷಣಾ ಇಲಾಖೆಗೆ ಭಾರಿ ಪ್ರಮಾಣದ ಅನುದಾನ ದೊರೆಯುವ ಸಾಧ್ಯತೆ ಇದ್ದು. ಇದಕ್ಕೆ ಸೂಚನೆಯಂತೆ ಕೆಲ ವಾರಗಳ ಹಿಂದೆ ಪ್ರಧಾನಿ ಮೋದಿ ಈ ಆರ್ಥಿಕ ವರ್ಷದಲ್ಲಿ ಸೇನೆಯನ್ನು ಸಾಕಷ್ಟು ಆಧುನೀಕರಣಗೊಳಿಸುವ ಕಾರ್ಯಕ್ಕೆ ಕೈ ಹಾಕಬಹುದಾಗಿದೆ.

ಈ ಬಾರಿಯ ಬಜೆಟ್​ನಲ್ಲಿ ಮಧ್ಯಮ ವರ್ಗದ ಜನರಿಗೆ ಭಾರಿ ಕೊಡುಗೆ ಸಿಗುವ ಸಾಧ್ಯತೆ ಇದ್ದು. ಆದಾಯ ತೆರಿಗೆಯ ಸ್ಲಾಬ್​ನ್ನು 10 ಲಕ್ಷಕ್ಕೆ ಏರಿಸುವ ಸಾಧ್ಯತೆ ಇದ್ದು. ಇದೇ ಕಾರಣಕ್ಕೆ ಈ ಬಾರಿಯ ಬಜೆಟ್​ ಭಾರಿ ಕುತೂಹಲ ಮೂಡಿಸಿದೆ.

 

RELATED ARTICLES

Related Articles

TRENDING ARTICLES