Wednesday, April 2, 2025

ಸುದೀಪ್​ ಸಿನಿ ಪಯಣಕ್ಕೆ 29ನೇ ವಸಂತದ ಸಂಭ್ರಮ: ಟ್ವಿಟ್​ ಮಾಡಿ ಧನ್ಯವಾದ ಅರ್ಪಿಸಿದ ಕಿಚ್ಚ

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಸಿನಿ ರಂಗಕ್ಕೆ ಕಾಲಿಟ್ಟು 29 ವರ್ಷ ಪೂರ್ಣ ಆಗಿದೆ. ತಾಯವ್ವ ಚಿತ್ರದಿಂದ ಹಿಡಿದು ಮ್ಯಾಕ್ಸ್​ವರೆಗಿನ ಜರ್ನಿಯಲ್ಲಿ ಸುದೀಪ್​ ಸೋಲು ಮತ್ತು ಗೆಲುವು ಎರಡನ್ನೂ ಕಂಡಿದ್ದಾರೆ.

ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ಕೊಟ್ಟು ಅಭಿಮಾನಿಗಳ ಹೃದಯದಲ್ಲಿ ಖಾಯಂ ಜಾಗ ಮಾಡಿಕೊಂಡಿದ್ದಾರೆ. ಇಷ್ಟು ವರ್ಷದ ಸಪೂರ್ಣ ಹಾದಿಯಲ್ಲಿ ಸಾಥ್ ಕೊಟ್ಟ ಪ್ರತಿಯೊಬ್ಬರಿಗೂ ಕಿಚ್ಚ ಸುದೀಪ್  ಹೃದಯದಾಳದಿಂದಲೇ ಧನ್ಯವಾದ ಹೇಳಿದ್ದಾರೆ. ಸಿನಿಮಾಗಳನ್ನು ನೋಡಿ ಪ್ರತಿ ಸಿನಿಮಾಗೂ ಹುರಿದುಂಬಿಸಿ ಸ್ಪೂರ್ತಿ ನೀಡಿದ ಅಭಿಮಾನಿಗಳಿಗೂ ಸುಧೀಪ್​ ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತು ಕಿಚ್ಚ ಸುದೀಪ್​ ತಮ್ಮ ಎಕ್ಷ್​ ಖಾತೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಬರೆದುಕೊಂಡಿದ್ದು. ಅಭಿಮಾನಿಗಳಿಗೆ ಥ್ಯಾಂಕ್ಸ್​ ಹೇಳಿದ್ದಾರೆ.

ಇದನ್ನೂ ಓದಿ: ಮಿಥೇನ್​ ತುಂಬಿದ್ದ ಲಾರಿ ಪಲ್ಟಿ: ಬ್ಲಾಸ್ಟ್​ ಆಗುವ ಸಾಧ್ಯತೆ, ಅಧಿಕಾರಿಗಳಿಂದ ಗ್ರಾಮಸ್ಥರಿಗೆ ಎಚ್ಚರಿಕೆ

ಏನಿದೆ ಸುದೀಪ್​ ಟ್ವಿಟ್​ನಲ್ಲಿ !

ಸಿನಿರಂಗಕ್ಕೆ ಕಾಲಿಟ್ಟು 29 ವರ್ಷಗಳು ಪೂರ್ಣಗೊಂಡಿವೆ. ಈ ಜರ್ನಿಯಲ್ಲಿ ಸಾಥ್​ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಅಭಿಮಾನಿಗಳೊಂದಿಗೆ ಅನೇಕ ಕಥೆಗಳನ್ನು ಹಂಚಿಕೊಂಡಿರುವುದು ಸಂತಸ ತಂದಿದ್ದು. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ನನಗೆ ಮತ್ತಷ್ಟು ಹುರುಪನ್ನು ನೀಡಿದೆ ಎಂದು ಹೇಳಿದ್ದು. ಈ ಜರ್ನಿಯಲ್ಲಿ ಸಾಥ್​ ಕೊಟ್ಟ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

 

RELATED ARTICLES

Related Articles

TRENDING ARTICLES