Friday, January 31, 2025

ಬರ್ತಡೇ ಮಾಡಲಿಲ್ಲ ಎಂದು ಮನೆಬಿಟ್ಟು ಹೋಗಿದ್ದ ಬಾಲಕನನ್ನು ಹುಡುಕಿ ಹುಟ್ಟುಹಬ್ಬ ಆಚರಿಸಿದ ಪೊಲೀಸರು

ಛತ್ತೀಸಗಡ್​ : ಮನೆಯಲ್ಲಿ ಬರ್ತಡೆ ಆಚರಿಸಲಿಲ್ಲ ಎಂದು 10 ವರ್ಷದ ಬಾಲಕನೋರ್ವ ಮನೆ ಬಿಟ್ಟು ಹೋದ ಘಟನೆ ಛತ್ತೀಸಗಡ್​ದ ನಾಗ್ಪುರದಲ್ಲಿ ನಡೆದಿದ್ದು. ಬಾಲಕನನ್ನು ಹುಡಿಕಿದ ಪೊಲೀಸರು ಬಾಲಕನಿಗೆ ಹುಟ್ಟುಹಬ್ಬ ಆಚರಿಸಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೌದು.. ಮಕ್ಕಳು ಸಣ್ಣಪುಟ್ಟ ವಿಷಯಗಳಿಗೆ ಹಠ ಮಾಡುವುದನ್ನು, ಕೋಪ ಮಾಡಿಕೊಂಡು ಮಾತನಾಡದಿರುವುದನ್ನು ನೋಡಿರುತ್ತೇವೆ. ಇನ್ನು ಕೆಲವು ಮಕ್ಕಳು ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗುತ್ತಾರೆ. ಅದೇ ರೀತಿಯಾಗಿ ಇಲ್ಲೊಬ್ಬ ಬಾಲಕ ಹುಟ್ಟುಹಬ್ಬ ಆಚರಿಸಲಿಲ್ಲ ಎಂದು ಮನೆ ಬಿಟ್ಟು ಹೋಗಿದ್ದಾನೆ.

ಛತ್ತೀಸಗಡದ ನಾಗ್ಪುರದ ವಾಠೋಡ ಎಂಬಲ್ಲಿ ಘಟನೆ ನಡೆದಿದ್ದು. ಬಾಲಕ ಸಂಚಿತ್​ ಅರವಿಂದ್​ ಎಂಬ ಬಾಲಕ ಮನೆ ಬಿಟ್ಟು ಹೋಗಿದ್ದಾನೆ. ಜನವರಿ 30ರಂದು ಸಂಚಿತ್​ ಅರವಿಂದ್​ ಎಂಬ ಹುಡುಗನ ಹುಟ್ಟುಹಬ್ಬವಿತ್ತು. ಆದರೆ ಕಾರಣಾತಂರಗಳಿಂದ ಆತನ ಮನೆಯವರು ಹುಟ್ಟುಹಬ್ಬವನ್ನು ಆಚರಿಸಿರಲಿಲ್ಲ.ಇದರಿಂದ ಬೇಸರಗೊಂಡ ಸಂಚಿತ್‌ ಬೆಳಗ್ಗೆ 11 ಗಂಟೆಯ ಸುಮಾರಿಗೆ ಮನೆ ಬಿಟ್ಟು ಹೋಗಿದ್ದಾನೆ. ಅಕ್ಕಪಕ್ಕ ಹುಡುಕಿದರೂ ಸಂಚಿತ್‌ ಎಲ್ಲೂ ಕಾಣಿಸಿದೇ ಇದ್ದ ಕಾರಣ ಆತನ ಪೋಷಕರು ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ತಕ್ಷಣ ಪೊಲೀಸರು ಬಾಲಕನಿಗಾಗಿ ಹುಡುಕಾಟ ನಡೆಸಲಾರಂಭಿಸಿದರು. ಹೀಗೆ ಸಂಜೆಯ ವೇಳೆ ಗಸ್ತು ತಿರುಗುತ್ತಿದ್ದ ಕಾನ್‌ಸ್ಟೇಬಲ್‌ ಸ್ವಾಮಿನಾರಾಯಣ ದೇವಸ್ಥಾನದ ಬಳಿ ಸಂಚಿತ್‌ ಇರುವುದು ಪತ್ತೆ ಹಚ್ಚಿ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಬಾಲಕನೊಂದಿಗೆ ಮಾತನಾಡಿ, ಆತನನ್ನು ಮನೆಗೆ ಕರೆದುಕೊಂಡು ಹೋಗಿ ಕೇಕ್‌ ಕಟ್‌ ಮಾಡಿಸಿ ಆತನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಹೀಗೆ ಬಾಲಕನ ಹುಟ್ಟುಹಬ್ಬವನ್ನು ಸ್ಮರಣೀಯವಾಗಿ ಆಚರಿಸುವ ಮೂಲಕ ಮಾನವೀಯತೆಯನ್ನು ಮರೆದಿದ್ದಾರೆ.

RELATED ARTICLES

Related Articles

TRENDING ARTICLES