ದಾವಣಗೆರೆ : ರಾಜ್ಯ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಒಳ ಜಗಳ ತಾರಕಕ್ಕೆ ಏರುತ್ತಿದ್ದು. ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಏಕವಚನದಲ್ಲೆ ಬಸನಗೌಡ ಯತ್ನಾಳ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್ ಒಬ್ಬ ಹಿಂದೂನೆ ಅಲ್ಲ ಎಂದು ಹೇಳಿದ್ದಾರೆ.
ಹೌದು.. ಬಿಜೆಪಿಯ ಬಣ ಬಡಿದಾಟ ಬಿಜೆಪಿಯ ಹಿಂದುತ್ವ ತತ್ವಕ್ಕೆ ಮುಳುವಾಗುವ ಹಂತಕ್ಕೆ ತಲುಪಿದ್ದು. ಕಟ್ಟರ್ ಹಿಂದು ಎಂದು ಗುರುತಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದು. ಏಕವಚನದಲ್ಲಿ ನಿಂದಿಸಿದ್ದಾರೆ.
ಇದನ್ನೂ ಓದಿ :ಪ್ರಿಯತಮೆಯ ಕತ್ತು ಕೊಯ್ದು ಬರ್ಬರವಾಗಿ ಕೊ*ಲೆ ಮಾಡಿದ ಪ್ರಿಯಕರ
ಯತ್ನಾಳ್ ಒಬ್ಬ ಹಿಂದೂನೇ ಅಲ್ಲ !
ದಾವಣಗೆರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರೇಣುಕಾಚಾರ್ಯ ‘ಯತ್ನಾಳ್ ಸೇರಿದಂತೆ ಕೆಲವರು ಆಕಾಶಕ್ಕೆ ಉಗುಳುವ ಕೆಲಸ ಮಾಡುತ್ತಿದ್ದಾರೆ. ಆದರೆ ಅದು ಅವರ ಮೇಲೆಯೆ ಬೀಳುತ್ತಿದೆ. ಯತ್ನಾಳ್ ಟಿಪ್ಪು ಖಡ್ಗ ಹಿಡಿದು ಡ್ಯಾನ್ಸ್ ಮಾಡಿದ್ದ. ಇಫ್ತಿಯಾರ್ ಕೂಟಕ್ಕೆ ಹೋಗಿದ್ದ. ಎಲ್ಲರಿಗೂ ಬಿರಿಯಾನಿ ತಿನ್ನಿಸಿದ್ದ. ಯತ್ನಾಳ್ ಒಬ್ಬ ಹಿಂದುನೇ ಅಲ್ಲ ಎಂದು ರೇಣುಕಾಚಾರ್ಯ ಯತ್ನಾಳ್ ವಿರುದ್ದ ವಾಗ್ದಾಳಿ ನಡೆಸಿದರು.