ಹಾವೇರಿ : ಬಿಗ್ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತ ಲಮಾಣಿಗೆ ಇಂದು ಸ್ವಗ್ರಾಮದಲ್ಲಿ ಅದ್ದೂರಿ ಸ್ವಾಗತ ದೊರೆತಿದ್ದು. ಗ್ರಾಮಸ್ಥರು ಡಿಜೆ ಮೂಲಕ ಹನುಮಂತನ ಸ್ವಾಗತ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಹನುಮಂತ ಈ ಸಲ ಕಪ್ ನಮ್ದೇ ಎಂದು ಹೇಳಿ ಸಂತಸ ಪಟ್ಟರು.
ಬಿಗ್ಬಾಸ್ ಸೀಸನ್ 11ರ ವಿನ್ನರ್ ಚಿಲ್ಲೂರ ಬಡ್ನಿಯ ಹನುಮಂತ ಲಮಾಣಿಗೆ ತವರಿನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಭರಮದೇವರು ವೃತ್ತದಲ್ಲಿ ನೂರಾರು ಸಂಖ್ಯೆಯ ಅಭಿಮಾನಿಗಳು ಶಾಲು,ಹೂವಿನ ಹಾರ ಹಾಕಿ ಸ್ವಾಗತಿಸಿದರು. ಈ ವೇಳೆ ನೂರಾರು ಅಭಿಮಾನಿಗಳು ಹನುಮಂತನನ್ನು ನೋಡಲು ನೆರೆದಿದ್ದರು.
ಇದನ್ನೂ ಓದಿ : ಪ್ರಿಯತಮೆಯ ಕತ್ತು ಕೊಯ್ದು ಬರ್ಬರವಾಗಿ ಕೊ*ಲೆ ಮಾಡಿದ ಪ್ರಿಯಕರ
ಈ ವೇಳೆ ಮಾತನಾಡಿದ ಹನುಮಂತ ‘ ಸವಣೂರು ಪಟ್ಟಣದ ಜನತೆಗೆ ಧನ್ಯವಾದ ಅರ್ಪಿಸಿದರು. ನೀವೆಲ್ಲಾ ಪ್ರೀತಿ ಅಭಿಮಾನದಿಂದ ವೋಟ್ ಹಾಕಿ ಗೆಲ್ಲಿಸಿದ್ದೀರ. ನಿಮ್ಮ ಪ್ರೀತಿ ಅಭಿಮಾನ ಹೀಗೆ ಇರಲಿ ಎಂದು ಕೇಳಿಕೊಂಡರು. ಈ ವೇಳೆ ಡಿಜೆ ಸೌಂಡ್ ಬಗ್ಗೆ ಮಾತನಾಡಿದ ಹನುಮಂತ ‘ಬಿಗ್ ಬಾಸ್ ಮನೆಯೊಳಗೆ ಸೌಂಡ್ ಕೇಳಿರಲಿಲ್ಲ. ಆದರೆ ಡಿಜೆ ಸೌಂಡ್ಗೆ ಕಿವಿ ಕೇಳದಂತಾಗಿದೆ. ಸೌಂಡ್ ಸ್ವಲ್ಪ ಕಡಿಮೆ ಕೊಡೋ ಮಾರಾಯ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಈ ವೇಳೆ ನೆರೆದಿದ್ದ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂದು ಜೋರಾಗಿ ಕೂಗಿದರು, ಈ ವೇಳೆ ಮತ್ತಷ್ಟು ಸಂತಸದಿಂದ ಹನುಮಂತ ನೆರೆದಿದ್ದ ಅಭಿಮಾನಿಗಳಿಗೆ ಈ ಸಲ ಕಪ್ ನಮ್ದೇ ಎಂದು ಹೇಳಿದರು. ಇದರಿಂದ ನೆರದಿಂದ ಸಾರ್ವಜನಿಕರು ಮತ್ತಷ್ಟು ಸಂತಸ ವ್ಯಕ್ತಪಡಿಸಿದರು.