ಬೆಂಗಳೂರು : ಕೆಲಸದ ಆಸೆ ತೋರಿಸಿ ಚೆಂದದ ಹೆಣ್ಣು ಮಕ್ಕಳನ್ನು ಕರೆತಂದು ವೇಶ್ಯಾವಾಟಿಕೆ ದೂಡುತ್ತಿದ್ದ ಇಬ್ಬರು ಆಂಟಿಯರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು. ಈ ಐನಾತಿ ಮಹಿಳೆಯರನ್ನು ಉಮಾ, ಪುಷ್ಪಲತಾ ಎಂದು ಗುರುತಿಸಲಾಗಿದೆ.
ಹೌದು.. ಕಷ್ಟ ಎಂದು ಹೆಣ್ಣು ಮಕ್ಕಳು ಕೆಲಸಕ್ಕೆ ಎಂದು ಮಹಾನಗರಗಳ ಕಡೆಗೆ ಬರುತ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಇಬ್ಬರು ಮಹಿಳೆಯರು ಯುವತಿಯರಿಗೆ ಕೆಲಸ ಕೊಡಿಸುವುದಾಗಿ ಹೇಳಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ. ಈ ಧಂದೆ ನಡೆಸಲು ಬಾಡಿಗೆ ಮನೆಗಳನ್ನು ಬಳಸಿಕೊಳ್ಳುತ್ತಿದ್ದ ಈ ಐನಾತಿ ಮಹಿಳೆಯರು ಇಂದು ಪೊಲೀಸರ ಅತಿಥಿಯಾಗಿದ್ದಾರೆ.
ಇದನ್ನೂ ಓದಿ :ಸುಧಾಕರ್ ರಾಜ್ಯಾಧ್ಯಕ್ಷ ಆಗಿ, ಸಿಎಂ ಆಗುವ ಲೆಕ್ಕಾಚಾರ ಹಾಕಿಕೊಂಡಿರಬಹುದು : ಪ್ರೀತಂಗೌಡ
ಬ್ಯಾಡರಹಳ್ಳಿ ಬಳಿಯ ಬಿಇಎಲ್ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಪಡೆದಿದ್ದ ಮಹಿಳೆಯರು ಹೊರ ರಾಜ್ಯದಿಂದ ಕೆಲಸಕ್ಕೆ ಬರುವ ಹೆಣ್ಣು ಮಕ್ಕಳಿಗೆ ಗಾಳ ಹಾಕುತ್ತಿದ್ದರು. ಕೆಲಸದ ಆಸೆ ತೋರಿಸಿ ಈ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದರು. ಗಿರಾಕಿಗಳನ್ನು ಪೋನ್ ಮೂಲಕ ಸಂಪರ್ಕ ಮಾಡುತ್ತಿದ್ದ ಇವರು, ಯುವತಿಯರ ಪೋಟೊಗಳನ್ನು ಗಿರಾಕಿಗಳಿಗೆ ಕಳುಹಿಸಿ 10 ರಿಂದ 12 ಸಾವಿರಕ್ಕೆ ರೇಟ್ ಫಿಕ್ಸ್ ಮಾಡುತ್ತಿದ್ದರು. ನಂತರ ಗಿರಾಕಿಗಳಿರುವ ಜಾಗಕ್ಕೆ ಯುವತಿಯರನ್ನು ಕಳುಹಿಸಿ ಧಂದೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಆದರೆ ಇಂದು ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿ, ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದು. ದಂಧೆಯ ಕಿಂಗ್ಪಿನ್ಗಳಾದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.