ಪ್ರಯಾಗರಾಜ್: ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇಂದು(ಜ.30) ಮದ್ಯಾಹ್ನಾ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದು. ಹತ್ತಾರು ಟೆಂಟ್ಗಳು ಸುಟ್ಟ ಭಸ್ಮವಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಯಾವುದೇ ಭಕ್ತರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.
ಛತ್ನಾಗ್ ಘಾಟ್ನ ನಾಗೇಶ್ವರ ಘಾಟ್ ಸೆಕ್ಟರ್ 22ರ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ಟೆಂಟ್ಗಳಲ್ಲಿ ಜನರು ಇರಲಿಲ್ಲ. ಆದರೆ ಈ ಅವಘಡದಲ್ಲಿ ಹತ್ತಾರು ಟೆಂಟ್ಗಳು ಸುಟ್ಟು ನಾಶವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಪ್ರಿಯತಮೆಯ ಕತ್ತು ಕೊಯ್ದು ಬರ್ಬರವಾಗಿ ಕೊ*ಲೆ ಮಾಡಿದ ಪ್ರಿಯಕರ
ಬುಧವಾರ ಮೌನಿ ಅಮವಾಸ್ಯೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಇದರಲ್ಲಿ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಜನವರಿ 19ರಂದು ಸಂಜೆ 4:30ರ ಸುಮಾರಿಗೆ ಮಹಾ ಕುಂಭ ಮೇಳದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಶಾಸ್ತ್ರಿ ಸೇತುವೆ ಬಳಿಯ ಸೆಕ್ಟರ್ 19ರಲ್ಲಿರುವ ಗೀತಾ ಪ್ರೆಸ್ನ ಶಿಬಿರದಲ್ಲಿ ಈ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದ ಗೀತಾ ಪ್ರೆಸ್ನ 180 ಪೆಂಡಾಲ್ಗಳು ಬೆಂಕಿಯಲ್ಲಿ ಸುಟ್ಟುಹೋಗಿತ್ತು. ಇದೀಗ ಮತ್ತೆ ಬೆಂಕಿ ಅವಘಡ ಸಂಭವಿಸಿದೆ.