Friday, January 31, 2025

ಹಾಲು ಮೊಸರು ಸಿಗೋದು ಡೌಟ್: KMF​ ಆಡಳಿತ ಮಂಡಳಿ ವಿರುದ್ದ ತೊಡೆ ತಟ್ಟಿದ ನೌಕರರು !

ಬೆಂಗಳೂರು : ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೆಎಂಎಫ್ ನೌಕರರು ಆಗ್ರಹಿಸಿದ್ದಾರೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿಯಿಂದ ಮುಷ್ಕರ ನಡೆಸುವುದಾಗಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಹೌದು.. ಕೆಎಂಎಫ್​ ಆಡಳಿತ ಮಂಡಳಿ ವಿರುದ್ದ ಕೆಎಂಎಫ್​ ಅಧಿಕಾರಿಗಳು ಮತ್ತು ನೌಕರರು ಸಮರ ಸಾರಿದ್ದು. ಏಳನೇ ವೇತನ ಆಯೋಗದ ವರದಿಯಂತೆ ವೇತನ ನೀಡಲು ಆಗ್ರಹಿಸಿದ್ದಾರೆ. ಆದರೆ ಆರ್ಥಿಕ ಹೊರೆ ಕಾರಣದಿಂದ ವೇತನ ಹೆಚ್ಚಳ ಮಾಡಲು ಕೆಎಂಎಫ್​ ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮಹಿಳೆಯನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು !

ಈ ಕುರಿತು ಮಾಹಿತಿ ನೀಡಿರುವ ಕೆಎಂಎಫ್​ ನೌಕರರ ಸಂಘದ ಅಧ್ಯಕ್ಷ ಗೋವಿಂದೆ ಗೌಡ ‘7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರನ ಶೇ 25 ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಈ ಪೈಕಿ ಶೇ 17 ರಷ್ಟು ಮಾತ್ರ ಹೆಚ್ಚಳ ಮಾಡಿದೆ. ಶೇ 8 ರಷ್ಟು ವೇತನ ಹೆಚ್ಚಳ, ಬಿಡುಗಡೆ ಬಾಕಿ ಇದೆ. ಅವುಗಳನ್ನು ಈಡೇರಿಸಬೇಕು ಎಂದು ಗೋವಿಂದಗೌಡ ಹೇಳಿದ್ದಾರೆ. ಜೊತೆಗೆ, ಬೇಡಿಕೆಗಳು ಈಡೇರುವ ಭರವಸೆ ಇದೆ ಎಂದೂ ಹೇಳಿದ್ದಾರೆ.

ಒಂದು ವೇಳೆ ಆಡಳಿತ ಮಂಡಳಿ ನೌಕರರ ಮನವಿಗೆ ಸ್ಪಂದಿಸದಿದ್ದರೆ. ಫೆ.01ರಂದು ಕೆಎಂಎಫ್​ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ರಾಜ್ಯದ್ಯಂತ 7000ಕ್ಕೂ ಹೆಚ್ಚು ಅಧಿಕಾರಿಗಳು – ನೌಕರರು ಕೆಎಂಎಫ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಒಂದು ವೇಳೆ ಇವರೆಲ್ಲ ಮುಷ್ಕರಕ್ಕೆ ಮುಂದಾದರೆ ಫೆ.01ರಂದು ಹಾಲು, ಮೊಸರು ಸಿಗದೆ ರಾಜ್ಯದ ಜನರು ಪರಿತಪಿಸುವಂತಾಗುತ್ತದೆ.

RELATED ARTICLES

Related Articles

TRENDING ARTICLES