Thursday, January 30, 2025

ಸಾಲಭಾದೆ, ಕೈಕೊಟ್ಟ ಬೋರ್​ವೆಲ್​: ಯುವರೈತ ಆತ್ಮಹ*ತ್ಯೆಗೆ ಶರಣು

ಮಂಡ್ಯ: ಸಾಲಭಾದೆ ತಾಳಲಾರದೆ ಯುವ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು. 34 ವರ್ಷದ ಸಂಜಯ್​ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಮಂಡ್ಯದ ಮಳವಳ್ಳಿ ತಾಲೂಕಿನ ದುಗ್ಗನಹಳ್ಳಿಯ ಸಂಜಯ್ 30 ಗುಂಟೆ ಜಮೀನು ಹೊಂದಿದ್ದನು. ತಂದೆ ವೆಂಕಟಶೆಟ್ಟಿ ಹೆಸರಿನಲ್ಲಿ ಸೊಸೈಟಿಯಿಂದ 50ಸಾವಿರ ಹಣ ಮತ್ತು ಪತ್ನಿಯ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್​ಗಳಿಂದ 50 ಸಾವಿರ ಸಾಲ ಪಡೆದಿದ್ದನು. ಸಾವಿರಾರು ಹಣವನ್ನು ಖರ್ಚು  ಮಾಡಿ 2 ಬೋರ್​ವೆಲ್​ ಕೊರಿಸಿದ್ದ ಸಂಜಯ್​ ನೀರು ಬರದೆ ಹತಾಶನಾಗಿದ್ದನು. ಇದೇ ಕಾರಣಕ್ಕೆ ಸಂಜಯ್​​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆತನ ತಂದೆ ದೂರು ನೀಡಿದ್ದಾರೆ.

ಇದನ್ನೂ ಓದಿ :ಉಡುದಾರದಿಂದ ನೇಣು ಬಿಗಿದುಕೊಂಡು ಅಪ್ರಾಪ್ತ ಬಾಲಕ ಸಾ*ವು : ನೋಡುತ್ತ ನಿಂತ ತಂಗಿ !

ಸಂಜಯ್​ ತಂದೆ ನೀಡಿದ ದೂರಿನನ್ವಯ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಳವಳ್ಳೀ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES