Wednesday, April 16, 2025

ಅತ್ಯಾಚಾರಿ ಗುರ್ಮೀತ್​ ರಾಮ್​ ರಹೀಮ್​ ಸಿಂಗ್​ಗೆ ಮತ್ತೆ ಪೆರೋಲ್​ ಭಾಗ್ಯ !

ದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಗುರ್ಮೀತ್​ ರಾಮ್​ ರಹೀಮ್​ ಸಿಂಗ್​ಗೆ 30 ದಿನಗಳ ಪೆರೋಲ್​ ದೊರೆತಿದೆ ಎಂದು ಮಾಹಿತಿ ಲಭಿಸಿದ್ದು. ಸ್ವಯಂ ಘೋಷಿತ ದೇವಮಾನ ಗುರ್ಮೀತ್​ ಇಂದು ಬೆಳಗಿನ ಜಾವ 5:26ಕ್ಕೆ ಜೈಲಿನಿಂದ ಹೊರಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ 2017 ರಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಎರಡು ಪ್ರತ್ಯೇಕ ಪ್ರಕರಣದಲ್ಲಿ ನ್ಯಾಯಾಲಯ ಈತನಿಗೆ 20 ವರ್ಷಗಳ ಶಿಕ್ಷೆ ವಿಧಿಸಿ ಜೈಲಿಗಟ್ಟಿತ್ತು. ಜೊತೆಗೆ 2019 ರಲ್ಲಿ, 16 ವರ್ಷಗಳ ಹಿಂದೆ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿಯೂ ಈತನಿಗೆ ಶಿಕ್ಷೆ ವಿಧಿಸಲಾಗಿತ್ತು.

ಇದನ್ನೂ ಓದಿ : ಖಾಸಗಿ ಬಸ್ ಮಾಲೀಕರಿಂದ KSRTC ವಿರುದ್ಧ ಪ್ರತಿಭಟನೆ !

ಸುದೀರ್ಘ ಶಿಕ್ಷೆಗೆ ಒಳಗಾಗಿರುವ ಈತ ಕಳೆದ 7 ವರ್ಷಗಳಲ್ಲಿ 12 ಬಾರಿ ಪೆರೋಲ್​ ಪಡೆದು ಹೊರಗೆ ಬಂದಿದ್ದಾನೆ. ಜೈಲಿನಿಂದ ಹೊರಗೆ ಬಂದಿರುವ ಈತ  ಹರಿಯಾಣದ ಸಿರ್ಸಾದಲ್ಲಿರುವ ಡೇರಾ ಆಶ್ರಮದಲ್ಲಿ ಉಳಿಯುತ್ತಾರೆ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ 2024ರ ಅಕ್ಟೋಬರ್​ನಲ್ಲಿ ಈತನಿಗೆ ನ್ಯಾಯಾಲಯ 30 ದಿನಗಳ ಪೆರೋಲ್​ ನೀಡಿ ಹೊರಗೆ ಕಳುಹಿಸಿತ್ತು.

RELATED ARTICLES

Related Articles

TRENDING ARTICLES