ವಿಜಯಪುರ : ಹಾಡಹಗಲೇ ಗುಂಡಿನ ದಾಳಿ ನಡೆದಿದ್ದು. ದುಷ್ಕರ್ಮಿಗಳು ಕಾರಿನ ಮೇಲೆ ಗುಂಡು ಹಾರಿಸಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೃತ ಯುವಕನನ್ನು ಸತೀಶ್ ರಾಠೋಡ್ ಎಂದು ಗುರುತಿಸಲಾಗಿದೆ.
ರಮೇಶ್ ಚೌಹಾಣ್ ಮತ್ತು ಇತರರಿಂದ ದುಷ್ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದ್ದು. ಘಟನೆ ನಡೆದ ಸ್ಥಳದಲ್ಲಿ ಹಲ್ಲೆಕೋರನೊಬ್ಬನ ಕಿವಿ ತುಂಡಾಗಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಬಗ್ಗೆ ಸತೀಶ್ ತಂದೆ ಆರೋಪ ಮಾಡಿದ್ದು. ಯುವತಿಯೊಬ್ಬಳ ತಂದೆ ತನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆ ಹಿನ್ನಲೆ !
ಮೃತ ಸತೀಶ್ ರಾಠೋಡ್ ಕಳೆದ ಒಂದೆವರೆ ವರ್ಷದ ಹಿಂದೆ ರಮೇಶ್ ಚೌವ್ಹಾಣ್ ಪುತ್ರಿಯನ್ನು ಮದುವೆ ಮಾಡಿಕೊಡುವಂತೆ ಪ್ರಸ್ತಾಪ ಮಾಡಿದ್ದನು. ಆದರೆ ರಮೇಶ್ ತನ್ನ ಮಗಳನ್ನು ಈತನಿಗೆ ಕೊಡಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಇದಾದ ಬಳಿಕ ಒಂದು ವರ್ಷದ ಹಿಂದೆ ರಮೇಶ್ ಮಗಳು ಬಾವಿಗೆ ಬಿದ್ದು ಮೃತಪಟ್ಟಿದ್ದಳು.
- ಇದನ್ನೂ ಓದಿ : ಮೆಕ್ಕಾ, ಮದೀನಾಗೆ ಹೋದರೆ ಸ್ವರ್ಗ ಸಿಗುತ್ತಾ : ಖರ್ಗೆ ಹೇಳಿಕೆಗೆ ಪರಿಷತ್ ಸದಸ್ಯ ರವಿಕುಮಾರ್ ಲೇವಡಿ !
ತನ್ನ ಮಗಳು ಸಾಯಲು ಕಾರಣ ಈತನೇ ಎಂಬ ದ್ವೇಷ ರಮೇಶ್ ಮತ್ತು ಆತನ ಸಹಚರರಿಗೆ ಇತ್ತು. ಅದೇ ಕಾರಣಕ್ಕೆ ಇಂದು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಮೃತ ಸತೀಶ್ ತಂದೆ ಪ್ರೇಮ್ ಸಿಂಗ್ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ವಿಜಯಪುರ ಎಸ್.ಪಿ ಲಕ್ಷ್ಮಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಘಟನೆಗೆ ಕಾರಣವೇನು ಎಂಬುದು ತನಿಖೆ ನಂತರವೇ ಹೊರಗೆ ಬರಬೇಕಿದೆ. ಘಟನಾ ಸ್ಥಳದಲ್ಲಿ ಮೃತ ಸತೀಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.