ಮಂಡ್ಯ : ಕ್ಷುಲ್ಲಕ ಕಾರಣಕ್ಕೆ ತಾಯಿಯೊಬ್ಬಳು ಮಕ್ಕಳ ಜೊತೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು. ಸ್ಥಳೀಯರು ತಾಯಿಯನ್ನು ರಕ್ಷಿಸಿದ್ದು. ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮಂಡ್ಯದ ಪಾಂಡವಪುರದ ಬನಘಟ್ಟ ಗ್ರಾಮದ ಬಳಿ ಘಟನೆ ನಡೆದಿದ್ದು. ವಿಧ್ಯಾ ಎಂಬಾಕೆ ಈ ಕೃತ್ಯವನ್ನು ಮಾಡಿದ್ದಾಳೆ. ಇಂದು ಸಂಜೆ ಮಗಳು ಶಾಲೆಯಿಂದ ಮನೆಗೆ ಮರಳಿದ ನಂತರ ನಾಲೆಯ ಬಳಿಗೆ ಕರೆದುಕೊಂಡು ಹೋಗದ್ದಳು. ಈ ವೇಳೆ ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಈ ವೇಳೆ ಅಲ್ಲೆ ಇದ್ದ ಸ್ಥಳೀಯರು ಇದನ್ನು ಗಮನಿಸಿ ತಾಯಿಯನ್ನು ರಕ್ಷಿಸಿದ್ದಾರೆ. ಆದರೆ ನದಿಯ ಸೆಳತಕ್ಕೆ ಮಕ್ಕಳು ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ. ನೀರು ಪಾಲಾದ ಮಕ್ಕಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹುಡುಕಾಟ ಆರಂಭಿಸಿದ್ದಾರೆ. ವಿದ್ಯಾ ಪತಿ ತುಮಕೂರಿನ ಚಿಕ್ಕನಾಯಕನಹಳ್ಳಿಯ ಖಾಸಗಿ ಫೈನಾನ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಒದಿ : ಸೂಟ್ಕೇಸ್ನಲ್ಲಿ ಮಹಿಳೆಯ ಸುಟ್ಟಶವ ಪತ್ತೆ : ಸುಳ್ಳು ಕೇಸ್ ಹಾಕುತ್ತೇನೆ ಎಂದವಳ ಕಥೆ ಮುಗಿಸಿದ ಯುವಕ !
ನೀರಿನಲ್ಲಿ ನಾಪತ್ತೆಯಾದ ಮಕ್ಕಳನ್ನು 8 ವರ್ಷದ ನಿಶಿಕಾ ಮತ್ತು ಒಂದುವರೆ ವರ್ಷದ ರಾಘವ್ ಎಂದು ಗುರುತಿಸಲಾಗಿದೆ. ಆದರೆ ಏನು ಅರಿಯದ ಮಕ್ಕಳು ತಾಯಿಯ ಕಾರಣಕ್ಕೆ ಬಲಿಯಾಗಿದ್ದಂತು ನಿಜಕ್ಕೂ ದುರಂತ ಎಂದೆ ಹೇಳಬಹುದಾಗಿದೆ.