ಹುಬ್ಬಳ್ಳಿ : ಹೆಂಡತಿ ಕಿರುಕುಳ ತಾಳಲಾರದೆ ಗಂಡನೋರ್ವ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು ಪೀಟರ್ ಎಂದು ಗುರುತಿಸಲಾಗಿದೆ.
ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ಘಟನೆ ನಡೆದಿದ್ದು. ಮೃತ ಪೀಟರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಆದರೆ ಕಳೆದ ಕೆಲ ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತಿದ್ದ ಪೀಟರ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ : ರಸ್ತೆ ಬದಿಯ ಮರಕ್ಕೆ ಥಾರ್ ಜೀಪ್ ಡಿಕ್ಕಿ : ಓರ್ವ ಸಾ*ವು : ಮೂವರು ಗಂಭೀರ !
ಡೆತ್ನೋಟ್ನಲ್ಲಿ ತನ್ನ ತಂದೆಗೆ ಕ್ಷಮೆ ಕೇಳಿರುವ ಪೀಟರ್, ತನ್ನ ಹೆಂಡತಿ ಪಿಂಕಿ ನೀಡುವ ಕಿರುಕುಳಕ್ಕೆ ಬೇಸತ್ತು ಸಾಯುತ್ತಿದ್ದೇನೆ. ಆಕೆ ನನ್ನ ಸಾವನ್ನು ನೋಡಲು ಬಯಸುತ್ತಿದ್ದಾಳೆ ಎಂದು ಪೀಟರ್ ಬರೆದಿದ್ದಾನೆ. ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.