ಯಾದಗಿರಿ : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದ್ದು. ಕೊಲೆ ಮಾಡಿದ ನಂತರ ಗಂಡ ಹೃದಯಾಘಾತದಿಂದ ಸತ್ತಿದ್ದಾನೆ ಎಂದು ನಾಟಕವಾಡಿದ್ದಾಳೆ. ಕೊಲೆಯಾದ ದುರ್ದೈವಿಯನ್ನು ಮಾನಪ್ಪ ಬಂಕಲದೊಡ್ಡಿ (34) ಎಂದು ಗುರುತಿಸಲಾಗಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಘಟನೆ ನಡೆದಿದೆ. ಕೊಲೆಯಾದ ಮಾನಪ್ಪ ಬಂಕಲದೊಡ್ಡಿ ಮತ್ತು ಲಕ್ಷ್ಮೀ ಇಬ್ಬರು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಪತ್ನಿ ಲಕ್ಷ್ಮೀ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ಪ್ರಶ್ನಿಸಿದ್ದ ಮಾನಪ್ಪ ಪತ್ನಿಯ ಜೊತೆ ಅನೇಕ ಬಾರಿ ಜಗಳವಾಡಿದ್ದ. ನಿನ್ನೆಯೋ ಕೂಡ ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿತ್ತು.
ಇದೇ ಕಾರಣದಿಂದ ನಿನ್ನೆ ಮಧ್ಯರಾತ್ರಿ ಲಕ್ಷ್ಮೀಯ ಪ್ರಿಯಕರ ಮಾನಪ್ಪನನ್ನು ಕೊಲೆ ಮಾಡಲು ಮನೆಗೆ ಎಂಟ್ರಿ ಕೊಟ್ಟಿದ್ದ. ಕೊಲೆ ಮಾಡುವಾಗ ಶಬ್ದ ಹೊರಬರದಂತೆ ಕಿಟಕಿ, ಬಾಗಿಲು ಬಂದ್ ಮಾಡಿ ಇಬ್ಬರು ಮಾನಪ್ಪನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದರು. ಹತ್ಯೆ ಮಾಡಿದ ನಂತರ ಲಕ್ಷ್ಮೀಯ ಪ್ರಿಯಕರ ಮನೆಯಿಂದ ಪರಾರಿಯಾಗಿದ್ದನು.
ಇದನ್ನೂ ಓದಿ : ಮೌನಿ ಅಮಾವಾಸ್ಯೆಯ ಜಾಗತಿಕ ಫಲಾಫಲಗಳು !
ಬಳಿಕ ಬೆಳಗಿನ ಜಾವ ಕಿಲಾಡಿ ಪತ್ನಿ ಲಕ್ಷ್ಮೀ ಗಂಡ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಜನರೆದುರಿಗೆ ಹೇಳಿ ನಾಟಕವಾಡಿದ್ದಳು. ಆದರೆ ಸುತ್ತಲಿನ ಜನ ಬಂದು ನೋಡಿದಾಗ ಮಾನಪ್ಪನ ದೇಹದ ಮೇಲೆ ರಕ್ತಸಿಕ್ತಗಾಯ, ರಕ್ತ ಹೆಪ್ಪುಕಟ್ಟಿರುವುದು ಕಂಡುಬಂದಿದ್ದು. ಕೈ ಕಾಲು ಮುರಿದಿರುವುದು ಬೆಳಕಿಗೆ ಬಂದಿದೆ. ಇದನ್ನು ನೋಡಿದ ಸ್ಥಳೀಯರು ಇದು ಹೃದಯಘಾತವಲ್ಲ, ಎಂದು ಅನುಮಾನ ಪಟ್ಟಿದ್ದಾರೆ. ಇದರಿಂದ ಭಯಗೊಂಡ ಐನಾತಿ ಹೆಂಡತಿ ಸ್ಥಳದಲ್ಲಿ ರಾದ್ದಾಂತ ಮಾಡಿದ್ದಾಳೆ.
ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು. ಸ್ಥಳಕ್ಕೆ ಭೇಟಿ ನೀಡಿದ ಹುಣಸಗಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಐನಾತಿ ಹೆಂಡತಿಯ ಮೇಲೆ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಸಹಕರಿಸಿದ ಆರೋಪಿಗೂ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.