Saturday, January 25, 2025

‘ನಾನು ಅಂತವಳಲ್ಲ, ನನ್ನ ಮೇಲೆ ಅನುಮಾನ ಪಡಬೇಡಿ’ : ಡೆತ್​ನೋಟ್​ ಬರೆದಿಟ್ಟು ಗೃಹಿಣಿ ಆತ್ಮಹ*ತ್ಯೆ !

ತುಮಕೂರು : ಗಂಡನ ಅನುಮಾನಕ್ಕೆ ಬೇಸತ್ತ ಮಹಿಳೆ ಡೆತ್ ನೋಟ್ ನಲ್ಲಿ ನಾನು ಅಂತವಳಲ್ಲ, ನಾನು ಏನು ತಪ್ಪು ಮಾಡಿಲ್ಲ, ನನ್ನ ಮೇಲೆ ಸಂಶಯ ಪಡುವುದು ಸರಿಯಲ್ಲ, ನಿಮ್ಮಗಳ ಬಾಯಿಂದ ಅನುಮಾನಿಸಿಕೊಂಡು ಬದುಕಲು ನನಗಿಷ್ಟವಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಮನೆಯ ಪಕ್ಕದ ಶೆಡ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಸಾರ್ವಜನಿಕರಿಂದ ಶಿಕ್ಷಕನಿಂದ ಧರ್ಮದೇಟು !

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಡೇನಹಳ್ಳಿ ಗ್ರಾಮದ ವಾಸಿಯಾದ ಲಕ್ಷ್ಮೀ ಎಂಬ ಸುಮಾರು 30 ವರ್ಷದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಂಗಳೂರು ಮೂಲದ ಈಕೆ ಮದುವೆಯಾಗಿ 6 ವರ್ಷ ಕಳೆದಿದ್ದು ಇಬ್ಬರು ಗಂಡು ಮಕ್ಕಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೂ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES