ಮೈಸೂರು: ಎಂಟಿಎಂಗೆ ತುಂಬ ಬೇಕಿದ್ದ ಹಣವನ್ನು ಕದ್ದು, ಪ್ರೇಯಸಿಗೆ ಚಿನ್ನ ಕೊಡಿಸಿದ್ದ ಖದೀಮನ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಳೆಕೆರೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ತುರುಗನೂರಿನ ಅಕ್ಷಯ್, ಮೈಸೂರಿನ ಟಿಎಲ್.ಎಂಟರ್ಪ್ರೈಸಸ್ನಲ್ಲಿ ಕೆಲಸ ಮಾಡುತ್ತಿದ್ದನು. ತಾನು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಸುಮಾರು 16 ಎಟಿಎಂಗಳಿಗೆ ಹಣ ತುಂಬುವ ಕೆಲಸವನ್ನು ಮಾಡುತ್ತಿದ್ದನು. ಆದರೆ ಕೆಲ ದಿನಗಳ ಹಿಂದೆ ಗದ್ದಿಗೆ ಗ್ರಾಮಾದ ಎಟಿಎಂಗೆ ಹಣ ತುಂಬಲು ಹೋಗಿದ್ದ ಅಕ್ಷಯ್ ಎಟಿಎಂಗೆ ಹಣ ತುಂಬದೆ 5 ಲಕ್ಷದ 80 ಸಾವಿರ ರೂಪಾಯಿ ಹಣವನ್ನು ತನ್ನ ಬ್ಯಾಗ್ಗೆ ಇಳಿಸಿದ್ದನು. ಇದೇ ಹಣದಲ್ಲಿ ತನ್ನ ಪ್ರೇಯಸಿಗೆ ಚಿನ್ನವನ್ನು ಕೊಡಿಸಿದ್ದನು.
ಇದನ್ನೂ ಓದಿ : ಗಾಂಧಿ ಅನುಯಾಯಿಯಾಗಿ ಗಾಂಧಿ ಭಾರತ್ ಕಾರ್ಯಕ್ರಮಕ್ಕೆ ಬಂದಿದ್ದೇನೆ : ಎಸ್.ಟಿ ಸೋಮಶೇಖರ್
ಘಟನೆ ಸಂಬಂಧ ಟಿ.ಎಲ್ ಎಂಟರ್ಪ್ರೈಸಸ್ ಸಂಸ್ಥೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿತ್ತು. ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು. ಆದರೆ ನಿನ್ನೆ ಅಕ್ಷಯ್ ತನ್ನ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡುವ ವೇಳೆ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.ಈ ವೇಳೆ ಪೊಲೀಸರಿಗೆ ಅವಾಜ್ ಹಾಕಿದ ಅಕ್ಷಯ್ ಪೊಲೀಸರನ್ನು ತಳ್ಳಾಡಿದ್ದಾನೆ. ಆದರೆ ಕೊನೆಗೂ ಆರೋಪಿಯನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.