Wednesday, January 22, 2025

ಬಸ್​ ಚಕ್ರದ ಕೆಳಗೆ ಸಿಲುಕಿ ಅಪರಿಚಿತ ವ್ಯಕ್ತಿ ಆತ್ಮಹ*ತ್ಯೆ : ಸಿಸಿಟಿವಿಯಲ್ಲಿ ಭೀಕರ ದೃಷ್ಯ ಸೆರೆ !

ಧಾರವಾಡ : ಅಪರಿಚಿತ ವ್ಯಕ್ತಿಯೊಬ್ಬ ಸರ್ಕಾರಿ ಸಾರಿಗೆ ಬಸ್ಸಿನ ಹಿಂಬದಿ ಚಕ್ರಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ನಡೆದಿದ್ದು, ವ್ಯಕ್ತಿ ಬಸ್ಸಿನ ಚಕ್ರಕ್ಕೆ ಬಿಳುತ್ತಿರುವ ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಸಾಗುತ್ತಿದ್ದ ಬಸ್’ಗೆ ವ್ಯಕ್ತಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ನೋಡಿದ ಇತರೆ ಪ್ರಯಾಣಿಕರು ಬೆಚ್ಚಿ ಬೀಳುವಂತೆ ಮಾಡಿದೆ.‌

ಧಾರವಾಡ ನಗರದ ಬೆಳಗಾವಿ ರಸ್ತೆಯ ಹೊಸ ಬಸ್​ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಿಲ್ದಾಣದ ಒಳಗೆ ಬಸ್ ಬರುತ್ತಿದಂತೆ, ಪ್ರಯಾಣಿಕರ ಸೋಗಿನಲ್ಲಿದ್ದ ವ್ಯಕ್ತಿ ಏಕಾಏಕಿ ಬಸ್ಸಿನ ಹಿಂಬದಿಯ ಚಕ್ರಕ್ಕೆ ನುಗ್ಗಿ ಬಿದ್ದಿರುವ ದೃಶ್ಯ ನಿಲ್ದಾಣದ ಸಿಸಿಟಿಯಲ್ಲಿ ಸೆರೆಯಾಗಿದೆ. ಇನ್ನೂ ವ್ಯಕ್ತಿಯ ದೇಹದ ಮೇಲೆ ಹರಿದಿದ್ದು, ಸ್ಥಳದಲ್ಲಿಯೇ ವ್ಯಕ್ತಿ ಸಾವನಪ್ಪಿದ್ದಾನೆ. ಅಪರಿಚಿತ ವ್ಯಕ್ತಿಯ ದುಡುಕಿನ ನಿರ್ಧಾರ ಘಟನೆಯಿಂದ ಬಸ್ ನಿಲ್ದಾಣದಲ್ಲಿ ಇದ್ದ ಇತರೆ ಪ್ರಯಾಣಿಕರು ಬೆಚ್ಚಿ ಬೀಳುವಂತೆ ಮಾಡಿದೆ.

ಇದನ್ನೂ ಓದಿ : ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಿಗೆ ಪೊಲೀಸ್​ ಟ್ರೀಟ್​ಮೆಂಟ್​ !

ಡಿಪೋ ಮ್ಯಾನೇಜರ್ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆಯ ಪೊಲೀಸರು, ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಪರಿಶೀಲನೆ ಕೈಗೊಂಡಿದ್ದಾರೆ. ವ್ಯಕ್ತಿಯ ಹೆಸರು ಸೇರಿದಂತೆ ಇನ್ನಿತರ ಮಾಹಿತಿ ಪೊಲೀಸರ ‌ಪ್ರಾಥಮಿಕ ತನಿಖೆಯ ನಂತರ ತಿಳಿದು ಬರಬೇಕಾಗಿದೆ. ವ್ಯಕ್ತಿ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಉಪನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.‌

RELATED ARTICLES

Related Articles

TRENDING ARTICLES