ಮಂಗಳೂರು : ಕೇವಲ ರಾಜ್ಯವಲ್ಲದೆ ದೇಶದ ಗಮನ ಸೆಳೆದಿದ್ದ ಉಲ್ಲಾಳದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ಈ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಜನವರಿ 17ರಂದು ಮಧ್ಯಹ್ನಾ 1 ಗಂಟೆ ಸುಮಾರು ಬ್ಯಾಂಕ್ಗೆ ಎಂಟ್ರಿ ಕೊಟ್ಟಿದ್ದ ಖದೀಮರ ಗ್ಯಾಂಗ್ ಬ್ಯಾಂಕ್ನಿಂದ ಸುಮಾರು 10ರಿಂದ 12 ಕೋಟಿಯಷ್ಟು ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವಂತೆ ಮಾಡಿತ್ತು. ಆದಷ್ಟು ಬೇಗನ ಆರೋಪಿಗಳನ್ನು ಬಂಧಿಸಬೇಕು ಎನ್ನುವ ಕೂಗು ಕೂಡ ಜೋರಾಗಿಯೆ ಕೇಳಿ ಬಂದಿತ್ತು.
ಇದನ್ನೂ ಓದಿ:ಟ್ರೈನಿ ವೈದ್ಯೆ ಅತ್ಯಾಚಾರ ಪ್ರಕರಣ, ಸಿಬಿಐ ಸರಿಯಾಗಿ ತನಿಖೆ ನಡೆಸಿಲ್ಲ ಎಂದ ಮಮತಾ ಬ್ಯಾನರ್ಜಿ
ಇದೀಗ ದರೋಡೆಕೋರರನ್ನು ಬಂಧಿಸಿದ್ದೇವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ಹಂಚಿಕೊಂಡಿದ್ದು. ಜನವರಿ 17ರಂದು ದರೋಡೆಕೋರರು ಮಹರಾಷ್ಟ್ರದ ಕಾರನ್ನು ಬಳಸಿ ಕೃತ್ಯವೆಸಗಿದ್ದರು. ಬ್ಯಾಂಕ್ನ್ನು ರಾಬರಿ ಮಾಡಿದ ನಂತರ ದರೋಡೆಕೋರರು ಕೇರಳ ಮುಖಾಂತರವಾಗಿ ತಮಿಳುನಾಡಿನ ತಿರುನೆಲ್ವೇಲಿಗೆ ಪರಾರಿ ಆಗಿದ್ದರು.
ಇದೀಗ ತಮಿಳುನಾಡಿನ ಮಧುರೈ ಸಮೀಪ ದರೋಡೆಕೋರರನ್ನು ಬಂಧಿಸಿದ್ದು. ಬಂಧಿತರಿಂದ 2 ಗೋಣಿಚೀಲ, ತಲ್ವಾರ್, 2 ಪಿಸ್ತೂಲ್ ಜಪ್ತಿ ಮಾಡಿದ್ದೇವೆ. ಬಂಧಿತ ಆರೋಪಿಗಳು ತಮಿಳುನಾಡಿನ ತಿರುನೆಲ್ವೇಲಿ ಮೂಲದವರು ಎಂದು ಮಂಗಳೂರು ಪೊಲೀಸ್ ಆಯುಕ್ತರು ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.