Saturday, January 18, 2025

ಯಾರ ಬಾಯಿಗೂ ಬೀಗ ಹಾಕಲು ಹಾಗಲ್ಲ, ವಿವೇಚನೆ ಬಳಸಿ ಮಾತನಾಡಬೇಕು : ಪ್ರಿಯಾಂಕ್​ ಖರ್ಗೆ

ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಕಾಂಗ್ರೆಸ್​ ನಾಯಕರಿಗೆ ವಾರ್ನಿಂಗ್​ ನೀಡಿದ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ‘ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಏನು ಹೇಳುತ್ತಿದ್ದರೊ ಅದನ್ನೇ ಎಐಸಿಸಿ ಅಧ್ಯಕ್ಷರು ಪುನರ್​ ಉಚ್ಚರಿಸಿದ್ದಾರೆ. ಆದರೆ ನಾವು ಯಾರ ಬಾಯಿಗೂ ಬೀಗ ಹಾಕಲು ಸಾಧ್ಯವಿಲ್ಲ. ಆದರೆ ಮಾತನಾಡ ಬೇಕಾದರೆ ವಿವೇಚನೆ ಬಳಸಿ ಮಾತನಾಡಿ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಪ್ರಿಯಾಂಕ್​ ಖರ್ಗೆ ‘ ನಾವು ಮಾತನಾಡುವ ಮಾತುಗಳು ಪಕ್ಷಕ್ಕೆ ಹಾನಿಯಾಗುವ ರೀತಿಯಲ್ಲಿರಬಾರದು, ಅದಕ್ಕೆ ಯೋಚನೆ ಮಾಡಿ ಮಾತನಾಡಬೇಕು. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತಿನ ಸೂಕ್ಷ್ಮತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಸಾಲ ಹಿಂತಿರುಗಿಸದ ಮಹಿಳೆಯ ಮಗಳನ್ನೆ ಮದುವೆ ಮಾಡಿಕೊಂಡ ಖದೀಮ !

ಅಧಿಕಾರ ಸಿಕ್ಕ ಮೇಲೆ ಕಾಂಗ್ರೆಸ್​ ಪಾರ್ಟಿ, ಎಐಸಿಸಿ ಅಧ್ಯಕ್ಷರು, ಕಾಂಗ್ರೆಸ್​ ಹೈಕಮಾಂಡ್​​ ಏನು ಮಾಡುತ್ತದೆ ಎನ್ನುವುದು ಸರಿಯಲ್ಲ. ಈ ವಿಷಯದ ಕುರಿತು ಅನೇಕ ನಾಯಕರು ಸಂದೇಶ ಕೊಟ್ಟಿದ್ದಾರೆ. ನಾವು ಅವರ ಸೂಚನೆ ಮೇರೆಗೆ ಕೆಲಸ ಮಾಡಬೇಕು ಎಂದು ಹೇಳಿದರು.

ಸಭೆ ಸೇರುವುದರಲ್ಲಿ ತಪ್ಪಿಲ್ಲ !

ದಲಿತ ನಾಯಕರ ಡಿನ್ನರ ಸಭೆಯ ಕುರಿತು ಮಾತನಾಡಿದ ಪ್ರಿಯಾಂಕ್​ ಖರ್ಗೆ ‘ಅವರು ಮಾಡಿದ್ದು, ಡಿನ್ನರ್​ ಪಾರ್ಟಿ ಅಲ್ಲ. ರಾಜಕಾರಣಿಗಳು ಆದರೂ ಕೂಡ ನಾವು ಸ್ನೇಹಿತರು, ಅದಕ್ಕೆ ಊಟಕ್ಕೆ ಎಂದು ಸೇರುತ್ತೇವೆ. ಹೈಕಮಾಂಡ್​ ನಾಯಕರು ಸೇರಬೇಡಿ ಎಂದು ಹೇಳಿಲ್ಲ. ನಾವು ಸಭೆ ಸೇರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES