ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿದ ಡಿ,ಕೆ ಶಿವಕುಮಾರ್ ‘ಇಂತಹ ಯಾವುದೇ ವಿಚಾರವಿದ್ದರು, ನಾನೇ ಹೇಳುತ್ತೀನಿ. ಆದರೆ ಈಗ ಪಕ್ಷದ ಶಿಸ್ತನ್ನು ಕಾಪಾಡಿಕೊಳ್ಳಲು ಪ್ರಧಾನ ಕಾರ್ಯದರ್ಶಿಗಳು, ಸಿಎಂ ಇಬ್ಬರು ಬುದ್ದಿ ಹೇಳಿದ್ದಾರೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಡಿಕೆ.ಶಿವಕುಮಾರ್ ‘ ನಾಳೆ ಬೆಳಗಾವಿಗೆ ಸುರ್ಜೇವಾಲ ಸಾಹೇಬರು ಬರುತ್ತಿದ್ದಾರೆ. ಇಂತಹ ಪಕ್ಷಕ್ಕೆ ಸಂಬಂಧಿಸಿದ ವಿಚಾರಗಳನ್ನು ಯಾರೂ ಕೂಡ ಮಾಧ್ಯಮದಲ್ಲಿ ಮಾತನಾಡಬಾರದು. ಮಾತಾಡೋದಾದರೆ ಹೈಕಮಾಂಡ್ ಬಳಿಯಲ್ಲಿ, ಅಥವಾ ನನ್ನ, ಸಿಎಂ ಬಳಿಯಲ್ಲಿ ಮಾತನಾಡಲಿ. ಹುದ್ದೆ, ಸ್ಥಾನಮಾನ ಎಂಬುದು ಅಂಗಡಿಯಲ್ಲಿ ಸಿಗುವ ವಸ್ತುವಲ್ಲ, ಅವುಗಳನ್ನು ನಮ್ಮ ಶ್ರಮ, ಫಲ ನೋಡಿ ಪಕ್ಷ ಕೊಡುತ್ತೆ. ಅವರು ಕೂಡ ಅದಕ್ಕೆ ಪ್ರಯತ್ನಿಸಬಹುದು.
ಇದನ್ನೂ ಓದಿ : KPCC ಅಧ್ಯಕ್ಷ ಸ್ಥಾನಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ : ಪರಮೇಶ್ವರ್
ಆದರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಡಿಕೆ ಶಿವಕುಮಾರ್ ಒಬ್ಬನೆ ಅಧಿಕಾರಕ್ಕೆ ತಂದಿಲ್ಲ. ಮತದಾರರು ಮತದಾನ ಮಾಡಿ ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಯಾರೆ ಹೋದ್ರು ಕೂಡ ಪಕ್ಷ ಇರುತ್ತೆ. ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟರು ಸಹ, ಅವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದರು. ಅಂಬೆಡ್ಕರ್ ಕೂಡ ಸಂವಿಧಾನದ ಫಲವನ್ನು ಪಡೆಯಲಿಲ್ಲ ಎಂದು ಹೇಳಿದರು.